ಡಿ.26ರಿಂದ ಡಿ.28ರ ತನಕ ತೊಡಿಕಾನ ಪಡ್ಪು ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಪಡ್ಪು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸ ಡಿ.26ರಿಂದ ಡಿ.28ರ ತನಕ ನಡೆಯಲಿದೆ ಎಂದು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಕೆ ನಾರಾಯಣ ಕುಂಟುಕಾಡು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ವಸ್ತಿ। ಶ್ರೀ ವಿಶ್ವಾವಸು ಸಂವತ್ಸರದ ಧನುರ್ ಮಾಸ ೧೦. ಸಲುವ ತಾರೀಕು 28-12-2025ನೇ ರವಿವಾರ ಪೂರ್ವಾಹ್ನ 7.00ರಿಂದ 8.00 ರ ತನಕ ಜರುಗುವ ಧನುರ್ ಲಗ್ನದ ಸುಮುಹೂರ್ತದಲ್ಲಿ ಆಲೆಟ್ಟಿ ಶ್ರೀ ವಿಷ್ಣುಮೂರ್ತಿ ದೈವದ ಪ್ರಧಾನ ಅರ್ಚಕರಾದ ಕುರಿಂಜ ತರವಾಡಿನ ಶ್ರೀ ರಾಮ ಮಣಿಯಾಣಿ ಇವರ ನೇತೃತ್ವದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು
ಜರುಗಲಿರುವುದು ಭಕ್ತಾಧಿಗಳಾದ ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಕೃಪೆಗೆ ಪಾತ್ರರಾಗಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.
ದಿನಾಂಕ: 21-12-2025ನೇ ರವಿವಾರದಂದು ಬೆಳಿಗ್ಗೆ ಗಂಟೆ 8.30ಕ್ಕೆ ಮುಹೂರ್ತದ ಗೊನೆ ಕಡಿಯುವುದು
ದಿನಾಂಕ: 26-12-2025ನೇ ಶುಕ್ರವಾರ ರಾತ್ರಿ ಗಂಟೆ 8.00ಕ್ಕೆ ಕುತ್ತಿ ಪೂಜೆ ದಿನಾಂಕ: 27-12-2025ನೇ ಶನಿವಾರ ಬೆಳಿಗ್ಗೆ ಗಂಟೆ 6.00ಕ್ಕೆ ಗಣಪತಿ ಹವನ ಅದೇ ದಿನ ಬೆಳಿಗ್ಗೆ ಗಂಟೆ 10.00 ರಿಂದ ಹಸಿರುವಾಣಿ ಮೆರವಣಿಗೆ (ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಪಡ್ಪು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನಕ್ಕೆ ಸಾಗಿ ಬರಲಿದೆ. ಸಂಜೆ ಗಂಟೆ 7.00ರಿಂದ ಶ್ರೀ ರಾಮ ಮಣಿಯಾಣಿ ಇವರ ನೇತೃತ್ವದಲ್ಲಿ ವೈವಿಕ ಕಾರ್ಯಕ್ರಮ ನಡೆಯುವುದು‌.
ದಿನಾಂಕ: 28-12-2025ನೇ ರವಿವಾರದಂದು ಬೆಳಿಗ್ಗೆ ಗಂಟೆ 7.00ರಿಂದ 3. ಶುಭ ಮುಹೂರ್ತದಲ್ಲಿ
ಶ್ರೀ ಮಹಾವಿಷ್ಣುಮೂರ್ತಿ ದೈವದ ಪ್ರನರ್ ಪ್ರತಿಷ್ಠಾ ಕಾರ್ಯಕ್ರಮ ನಂತರ ಮುಖಾಪೂಜೆ, ಪ್ರಸಾದ ವಿತರಣೆ, ನಿತ್ಯನೈಮಿತ್ತಕ ನಿಶ್ಚಯ ಬೆಳಿಗ್ಗೆ ಗಂಟೆ 1100ರಿಂದ ಶ್ರೀ ಮಹಾವಿಷ್ಣುಮೂರ್ತಿಗೆ ತಂಬಿಲ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಡಿ.28ರಂದು ಬೆಳಿಗ್ಗೆ 9.30 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು
ಶ್ರೀ ಮಹಾವಿಷ್ಣುಮೂರ್ತಿ ಜೀರ್ಣೋದ್ದಾರ ಸಮಿತಿ, ಅಧ್ಯಕ್ಷರಾದ ಚಂದ್ರಶೇಖರ ಬಾಳೆಕಜೆ ಅಧ್ಯಕ್ಷತೆ ವಹಿಸಲಿದ್ದಾರೆ.
ಡಾ. ಪೂವಪ್ಪ ಕಣಿಯೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಶಾಸಕಿ ಕು.ಭಾಗೀರಥಿ ಮುರುಳ್ಯ
ಕೇಶವ ಅಡ್ತಲೆ, ಅಧ್ಯಕ್ಷರು, ಗ್ರಾಂ.ಪ. ಅರಂತೋಡು
ಸಂತೋಷ್ ಕುತ್ತಮೊಟ್ಟೆ ಅಧ್ಯಕ್ಷರು, ಅರಂತೋಡು ಪ್ರಾ.ಕೃ.ಪ.ಸ.ಸಂಘ
ಹರೀಶ್ ಕಂಜಿಪಿಲಿ ಮಾಜಿ ಜಿ.ಪ. ಸದಸ್ಯರು, ಸೋಮಶೇಖರ ಕ್ಯೋಂಗಾಜೆ ಅಧ್ಯಕ್ಷರು, ಸಂಪಾಜೆ ಪ್ರಾ.ಕೃ.ಪ.ಸ.ಸಂಘ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕೆ. ಕೆ. ನಾರಾಯಣ ಅಧ್ಯಕ್ಷರು, ಶ್ರೀ ಮಹಾವಿಷ್ಣುಮೂರ್ತಿ ವ್ಯವಸ್ಥಾಪನಾ ಸಮಿತಿ ಟ್ರಸ್ಟ್(ರಿ)
ಪವಿತ್ರನ್ ಗುಂಡ್ಯ ಉಪಾಧ್ಯಕ್ಷರು, ಆಡಳಿತ ಮಂಡಳಿ ಶ್ರೀ ತಂಬೂರಾಟ ಭಗವತಿ ಕ್ಷೇತ್ರ ಸುತ್ತಿಕೋಲು
ಕೇಶವ ಯು.ಕೆ. ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ತೊಡಿಕಾನ, ಮಾಧವ ಗೌಡ ಯೋಜನಾಧಿಕಾರಿ, ಎಸ್.ಕೆ.ಆರ್.ಡಿ.ಪಿ.ಸುಳ್ಯ
ಭವಾನಿ ಚಿಟ್ಟನ್ನೂರು, ಉಪಾಧ್ಯಕ್ಷರು, ಗ್ರಾ.ಪ, ಆರಂತೋಡು, ರವೀಂದ್ರ ಪಂಜಿಕೋಡಿ ಸದಸ್ಯರು, ಗ್ರಾ.ಪ, ಅರಂತೋಡು, ಪದ್ಮಯ್ಯ ಗೌಡ ಪಡ್ಡು ಗೌರವಾಧ್ಯಕ್ಷರು,
ಶ್ರೀ ಮಹಾವಿಷ್ಣುಮೂರ್ತಿ ಜೀರ್ಣೋದ್ಧಾರ ಸಮಿತಿ ವೇದಿಕೆಯಲ್ಲಿ ಉಪಸ್ಥಿತರಿರುವರು.
ಪ್ರತಿಷ್ಠಾ ದಿನದಂದು ಬೆಳಿಗ್ಗೆ ಗಂಟೆ 8.00ರಿಂದ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘ ತೊಡಿಕಾನ ಮತ್ತು ಶ್ರೀ ಶಿವಶಂಕರಿ ಮಹಿಳಾ ಭಜನಾ ತಂಡ ತೊಡಿಕಾನ ಇವರಿಂದ ಭಜನಾ ಸೇವೆ ಜರುಗಲಿರುವುದು.





















































































Leave a Comment

Your email address will not be published. Required fields are marked *

error: Content is protected !!
Scroll to Top