ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025 : ಅಜ್ಜನಗದ್ದೆ ಶಾಲಾ ಮಕ್ಕಳಿಂದ ಸ್ವಚ್ಛತಾ ಜಾಥ

ಯುವಜನ ಸಂಯುಕ್ತ ಮಂಡಳಿ (ರಿ.), ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ (ರಿ.), ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ “ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025” ಕಾರ್ಯಕ್ರಮದ ಅಂಗವಾಗಿ ಡಿ.15ರಂದು ಅಜ್ಜನಗದ್ದೆ ಶಾಲಾ ಮಕ್ಕಳಿಗೆ ಸ್ವಚ್ಛತೆಯ ಮಹತ್ವ ಅರಿವು ಮೂಡಿಸುವ ಉದ್ದೇಶದಿಂದ ಸ್ವಚ್ಛತಾ ಜಾಥವನ್ನು ಯಶಸ್ವಿಯಾಗಿ ನಡೆಸಲಾಯಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಜಾಥವು ಅಜ್ಜನಗದ್ದೆ ಶಾಲೆಯಿಂದ ಆರಂಭಗೊಂಡು ಅಮರಪಡ್ನೂರು ಘನ ತ್ಯಾಜ್ಯ ಘಟಕದವರೆಗೆ ನಡೆಯಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಾರ್ಯಕ್ರಮವನ್ನುಅಮರಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭುವನೇಶ್ವರಿ ಇವರು ಚಾಲನೆ ನೀಡಿ ಆರಂಭಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೂಪವಾಣಿ, ಶಿಕ್ಷಕ ವೃಂದ ಹಾಗೂ ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಹೇಮಾವತಿ ತಂಟೆಪ್ಪಾಡಿ ಅವರ ನೇತೃತ್ವದಲ್ಲಿ ಸದಸ್ಯರುಗಳಾದ ವೀಣಾ, ಶ್ಯಾಮಲಾ, ಪವಿತ್ರ, ದಿವ್ಯ, ಸಂಧ್ಯಾ, ದೀಪಿಕಾ, ಶಶಿಕಲಾ, ಪುಷ್ಪಾವತಿ, ಮಮತಾ, ಹೇಮಲತಾ, ಇನ್ನಿತರ ಯುವತಿ ಮಂಡಲದ ಸದಸ್ಯೆಯರು ಉತ್ಸಾಹಭರಿತವಾಗಿ ಪಾಲ್ಗೊಂಡು, ಪರಿಸರ ಶುದ್ಧೀಕರಣ ಹಾಗೂ ಸ್ವಚ್ಛತೆಯ ಅಗತ್ಯತೆಯನ್ನು ಮಕ್ಕಳಿಗೂ ಸಾರ್ವಜನಿಕರಿಗೂ ಪ್ರಾಯೋಗಿಕವಾಗಿ ತಿಳಿಸಿದರು.

ಈ ಸ್ವಚ್ಛತಾ ಜಾಥವು ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಉತ್ತಮ ಸ್ಪಂದನೆ ಪಡೆದಿದ್ದು, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.

Leave a Comment

Your email address will not be published. Required fields are marked *

error: Content is protected !!
Scroll to Top