ಡಿ.27,28,29ಕ್ಕೆ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಅದ್ದೂರಿ ಅಮೃತ ಮಹೋತ್ಸವ : ಸವಣೂರು ಸೀತಾರಾಮ ರೈ

ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಇದರ ಅಮೃತ ಮಹೋತ್ಸವ ಕಾರ್ಯಕ್ರಮ ಡಿ. 27, 28, 29ರಂದು ಅದ್ದೂರಿಯಾಗಿ ನಡೆಯಲಿದೆ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ‌ ರೈ ತಿಳಿಸಿದ್ದಾರೆ.
ಅವರು ಡಿ. 22 ರಂದು ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಯಶಸ್ವಿಗೆ ಸುಳ್ಯದ ಎಲ್ಲಾ ಮುಖಂಡರುಗಳು, ಹಾಗೂ ಸಂಸ್ಥೆಯ ಶಿಕ್ಷಕ ವೃಂದ, ಉಪನ್ಯಾಸಕರು ಹಗಲಿರುಳು ಶ್ರಮಪಡುತಿದ್ದು ಊರಿನ ಸಮಸ್ತ ಬಾಂಧವರು,ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಮಾಡಿಕೊಡಬೇಕು.
ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಶಾಲೆಗೆ ಶಾಶ್ವತವಾದ ಯೋಜನೆಯನ್ನು ರೂಪಿಸಬೇಕೆಂದು ಆಲೋಚಿಸಿದಾಗ ಈ ಆಲೋಚನೆಗಳಿಗೆ ಪೂರಕವಾಗಿ ಸುಳ್ಯದ ಮಹಾನ್ ಧಾನಿಗಳು ಸಹಕಾರ ನೀಡಿದ್ದಾರೆ. ವಿಶೇಷವಾಗಿ ಸುಳ್ಯದ ಅಮರಶಿಲ್ಪಿ ದಿ. ಕುರುಂಜಿ ವೆಂಕಟ್ರಮಣ ಗೌಡ ರವರ ಪುತ್ರ ಡಾ. ಕೆ ವಿ ಚಿದಾನಂದರವರು ಶಾಲೆಗೆ ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿ ಕೊಡಲು ಇಚ್ಚಿಸಿರುವ ನೂತನ ತರಗತಿ ಕೊಠಡಿ, ಅದೇ ರೀತಿ ನಿರ್ಮಾಣ ಹಂತದಲ್ಲಿರುವ ಶಾಲೆಯ ನೂತನ ಭೋಜನಾಲಯ ಕಟ್ಟಡಕ್ಕೆ 13 ಲಕ್ಷ ರೂಪಾಯಿ ಸಹಕಾರವನ್ನು ನೀಡಿ ಸಹಕರಿಸಿದ ನಿವೃತ್ತ ಮುಖ್ಯ ಶಿಕ್ಷಕರಾದ ಕೃಷ್ಣ ನಾವಡ ಅವರ ಕುಟುಂಬದ ಸದಸ್ಯರ ಸಹಕಾರ ಶ್ಲಾಘನೀಯ ಎಂದು ಹೇಳಿದರು

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

75 ವರ್ಷವನ್ನು ಪೂರೈಸಿರುವ ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಇದರ ಅಮೃತ ಮಹೋತ್ಸವ ಕಾರ್ಯಕ್ರಮ ಡಿ. 27, 28, 29 ಈ ಮೂರು ದಿನಾಂಕಗಳಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದ ಯಶಸ್ವಿಗೆ ಸುಳ್ಯದ ಎಲ್ಲಾ ಮುಖಂಡರುಗಳು, ಹಾಗೂ ಸಂಸ್ಥೆಯ ಶಿಕ್ಷಕ ವೃಂದ, ಉಪನ್ಯಾಸಕರು ಹಗಲಿರುಳು ಶ್ರಮಪಡುತಿದ್ದು ಊರಿನ ಸಮಸ್ತ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಮಾಡಿಕೊಡುವಂತೆ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಸವಣೂರು ಸೀತಾರಾಮ ರೈ ಯವರು ವಿನಂತಿಸಿಕೊಂಡರು.
ಅಮ್ರತ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮ ಡಿ.27ರಂದು ಉದ್ಘಾಟನೆ ನಡೆಯಲಿದ್ದು ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಬ್ರಿಜೇಶ್ ಚೌಟ, ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಎಸ್‌. ಎಲ್. ಭೋಜೇ ಗೌಡ ರವರು ಉಪಸ್ಥಿತರಿರುತ್ತಾರೆ.
ವಿಶೇಷ ಆಹ್ವಾನಿತರಾಗಿ ಕರ್ನಾಟಕ ಸರಕಾರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಮ್ ಶಹೀದ್ ತೆಕ್ಕಿಲ್,ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ದ.ಕ. ಜಿಲ್ಲಾ ಅಧ್ಯಕ್ಷರಾದ ಭರತ್ ಮುಂಡೋಡಿ, ತಾಲೂಕು ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಸ್ತಾಫ ಕೆ. ಎಂ. ಹಾಗೂ ಇನ್ನಿತರ ಗಣ್ಯರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಅಪರಾಹ್ನ 2 ಗಂಟೆಯಿಂದ ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6 ಗಂಟೆಯಿಂದ ಕಲಾಮಯಂ ಉಡುಪಿ ತಂಡದಿಂದ ಜಾನಪದ ನಾಟ್ಯ ವೈಭವ ಕಾರ್ಯಕ್ರಮ ನಡೆಯಲಿದೆ.
ಡಿ. 28 ರಂದು ಪೂರ್ವಾಹ್ನ 10 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ವಿಶೇಷವಾಗಿ ಆ ದಿನ ಸಂಸ್ಥೆಯಲ್ಲಿ ದುಡಿದು ವಿಶ್ರಾಂತಿಯಲ್ಲಿರುವ ಮತ್ತು ಇತರ ಸಂಸ್ಥೆಗಳಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಎಲ್ಲಾ ಅಧ್ಯಾಪಕರುಗಳು ಹಾಗೂ ಉಪನ್ಯಾಸಕರುಗಳಿಗೆ ಗುರು ವಂದನಾ ಕಾರ್ಯಕ್ರಮ ನಡೆಯಲಿದೆ.ಆದ್ದರಿಂದ ಸಂಸ್ಥೆಯಲ್ಲಿ ದುಡಿದಿರುವ ಎಲ್ಲಾ ಶಿಕ್ಷಕರು ಹಾಗೂ ಉಪನ್ಯಾಸಕರಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿಕೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವರು ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಯೂ ಆದ ಎಸ್. ಅಂಗಾರರು ವಹಿಸಲಿದ್ದಾರೆ. ಪೂರ್ವ ಗುರುಗಳನ್ನು ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿಗಳು ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳಲ್ಲಿ ಓರ್ವರಾದ ಡಿ. ವಿ. ಸದಾನಂದ ಗೌಡರು ಗೌರವಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತರು ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಗಿರೀಶ್ ಭಾರದ್ವಾಜ್, ಡಾ. ಚಿದಾನಂದ ಗೌಡ ಕೊಳಂಬೆ ವಿಶ್ರಾಂತ ಉಪಕುಲಪತಿಗಳು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಅಪರಾಹ್ನ 2 ಗಂಟೆಗೆ ಹಿರಿಯ ವಿದ್ಯಾರ್ಥಿಗಳಿಂದ, ಪೋಷಕರಿಂದ, ಶಿಕ್ಷಕ ಹಾಗೂ ಉಪನ್ಯಾಸಕ ವೃಂದದವರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿದ್ದು ಬಳಿಕ 6.30 ರಿಂದ ಯಕ್ಷಗಾನ ಬಯಲಾಟ ನರಶಾರ್ದೂಲ, ಮತ್ತು ಸೀತಾಕಲ್ಯಾಣ ನಡೆಯಲಿದೆ.
ಡಿ 29 ಅಮೃತ ಮಹೋತ್ಸವ ಸಮಾರೋಪ ದಿನ ಪೂರ್ವಾಹ್ನ 10 ಗಂಟೆಗೆ ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಅಧ್ಯಕ್ಷರು ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಯಾದ ಡಾ. ಕೆ. ವಿ. ಚಿದಾನಂದ ಇವರು ದಾನ ರೂಪದಲ್ಲಿ ನೀಡುವ ರೂಪಾಯಿ ಒಂದು ಕೋಟಿ ವೆಚ್ಚದ ತರಗತಿ ಕೋಣೆಗಳ ಸಮುಚ್ಚಯದ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ.
ಬಳಿಕ ಪೂರ್ವಾಹ್ನ 10-30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಇದರ ಅಧ್ಯಕ್ಷತೆಯನ್ನು ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಡಾ ಕೆ ವಿ ಚಿದಾನಂದ ರವರು ವಹಿಸಲಿದ್ದಾರೆ. ದಿಕ್ಕೂಚಿ ಭಾಷಣಕಾರರಾಗಿ ಖ್ಯಾತ ವಾಲ್ಮೀ ಎನ್. ಆರ್. ದಾಮೋದರ ಶರ್ಮ ಬಾರ್ಕೂರು ಇವರು ಮಾತನಾಡಲಿದ್ದು ಮುಖ್ಯ ಅತಿಥಿಗಳಾಗಿ ಗ್ರೀನ್ ಹೀರೋ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ವಿದ್ಯಾರ್ಥಿಯೂ ಆದ ಆರ್ ಕೆ ನಾಯ‌ರ್ ಹಾಗೂ ಇತ್ತೀಚಿಗೆ ಒಂದು ಕೋಟಿ ರೂ ವೆಚ್ಚದಲ್ಲಿ ನಮ್ಮ ಶಾಲೆಗೆ ನೂತನವಾಗಿ ನಾಲ್ಕು ಕೊಠಡಿಗಳ ಕಟ್ಟಡವನ್ನು ನಿರ್ಮಿಸಿದ ಓಸಾಟ್ ಸಂಸ್ಥೆಯ ಸ್ಥಾಪಕರಾದ ವಾದಿರಾಜ ಭಟ್, ಸಿಪ್ರಿಯನ್ ಮೊಂತರೊ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಹಾಗೂ ಪೂರ್ವ ಉಪಪ್ರಾಂಶುಪಾಲರು, ಜಿ. ಎಸ್. ಶಶಿಧರ ಉಪನಿರ್ದೇಶಕರು
(ಆಡಳಿತ) ಶಾಲಾ ಶಿಕ್ಷಣ ಇಲಾಖೆ, ಹಾಗೂ ಪದನಿಮಿತ್ತ ಉಪ ನಿರ್ದೇಶಕರು (ಅಭಿವೃದ್ಧಿ), ಡಯಟ್ ಮಂಗಳೂರು ಇದರ ಸದಾನಂದ ಪೂಂಜ ಸೇರಿದಂತೆ ವಿವಿಧ ಗಣ್ಯರುಗಳು ಭಾಗವಹಿಸಲಿದ್ದಾರೆ.
ಅಪರಾಹ್ನ 1-30 ರಿಂದ ಪ್ರೌಢ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿದ್ದು ಇತ್ತೀಚಿಗೆ ದ ಕ ಜಿಲ್ಲೆ ಹಾಗೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪ್ರದರ್ಶನಗೊಂಡು ಜನರ ಮೆಚ್ಚುಗೆಗೆ ಪಾತ್ರವಾದ ಅರೆಭಾಷೆ ನಾಟಕ ‘ಅಪ್ಪ’ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸಂಜೆ 6:30 ರಿಂದ ಆರಂಭಗೊಂಡು 10 ಗಂಟೆಗೆ ಕೊನೆಗೊಳ್ಳಲಿದೆ. ಆದ್ದರಿಂದ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸರ್ವರು ಭಾಗವಹಿಸಿ ಯಶಸ್ವಿಗೊಳಿಸಿಕೊಡುವಂತೆ ಪತ್ರಿಕಾಗೋಷ್ಠಿ ಮೂಲಕ ಅವರು ಕೇಳಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ ಬಿ ಸದಾಶಿವ, ಕೋಶಾಧಿಕಾರಿ ಅಶೋಕ್ ಪ್ರಭು, ಸಂಘಟನಾ ಕಾರ್ಯದರ್ಶಿ ಮುಸ್ತಫಾ ಕೆ ಎಂ, ಅಮೃತ ಮಹೋತ್ಸವ ಸಮಿತಿಯ ಉಪಾಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕ‌ರ್ ರೈ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಲಿಂಗಪ್ಪ ಗೌಡ, ಎಸ್ ಡಿ ಎಂ ಸಿ ಅಧ್ಯಕ್ಷೆ ಮಂಜುಳಾ ಬಡಿಗೇ‌ರ್, ಅಮೃತ ಮಹೋತ್ಸವ ಸಮಿತಿಯ ಉಪಾಧ್ಯಕ್ಷರಾದ ಡಾ. ರಂಗಯ್ಯ,ಜೊತೆ ಕೋಶಾಧಿಕಾರಿ ರಾಮಚಂದ್ರ ಪಲ್ಲತಡ್ಕ, ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ಹಾಗೂ ಸಮಿತಿಯ ವಿವಿಧ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top