ಸುಳ್ಯದ ಕುರುಂಜಿ ವೆಂಕಟರಮಣ ಗೌಡರು ಸುಳ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸುಳ್ಯದ ಅಭಿವೃದ್ಧಿಗೆ ಕಾರಣರಾದರು.ಅವರ ಈ ಶೈಕ್ಷಣಿಕ ಸೇವೆ ಇತರರಿಗೆ ಮಾದರಿಯಾಗಲಿ ಎಂದು ಸುಳ್ಯ ಶಾಸಕಿ ಮುರುಳ್ಯ ಹೇಳಿದರು.
ಅವರು ಸುಳ್ಯದ ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ ೯೭ನೇ ಜಯಂತ್ಯೋತ್ಸವದ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ‘ಕೆವಿಜಿ ಸುಳ್ಯ ಹಬ್ಬದ ಅಂಗವಾಗಿ ಸುಳ್ಯದ ಚೆನ್ನಕೇಶವ ದೇವಳದ ವಠಾರದಲ್ಲಿ ಡಿ.25ರಂದು ಯುವ ಸಾಧಕರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಾಧಕರನ್ನು ಅವರು ಸನ್ಮಾನಿಸಿ ಮಾತನಾಡಿದರು.
ಕೆವಿಜಿ ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ಕೆ.ಟಿ ವಿಶ್ವನಾಥ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ಅವರು ಮಾತನಾಡಿ ಕುರುಂಜಿಯವರು ನಮಗೆ ಆದರ್ಶ ಪ್ರಾಯರು ಎಂದು ಹೇಳಿದರು.
ಯುವ ಸಾಧಕರಾದ ಮಯೂರ ಅಂಬೆಕಲ್ಲು (ಸಿನಿಮಾ ಕ್ಷೇತ್ರ)ರಮೇಶ್ ಮೆಟ್ಟಿನಡ್ಕ (ಸಾಂಸ್ಕೃತಿಕ ಕ್ಷೇತ್ರ)
ಹರ್ಷಿತ್ ಪಡ್ರೆ (ಮಾಧ್ಯಮ ಕ್ಷೇತ್ರ)
ಡಾ ಕಿಶನ್ ರಾವ್ (ವೈದ್ಯಕೀಯ ಕ್ಷೇತ್ರ) ಕು. ಜಸ್ಮಿತಾ ಕೊಡೆಂಕಿರಿ (ಕ್ರೀಡಾ ಕ್ಷೇತ್ರ)ರನ್ನು ಅಭಿನಂಧಿಸಲಾಯಿತು.
ಕೆವಿಜಿ ಸುಳ್ಯ ಹಬ್ಬ ಸಮಿತಿಯ ಕಾರ್ಯದರ್ಶಿ ಹರೀಶ್ ಬಂಟ್ವಾಳ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೋಶಧಿಕಾರಿ ಚಂದ್ರಾವತಿ ಬಡ್ಡಡ್ಕ ವಂದಿಸಿದರು.ಲತಾಶ್ರೀ ಸುಪ್ರಿತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಸಿಗ್ನೆಚರ್ ಡ್ಯಾನ್ಸ್ ಕಂಪೆನಿ ಮೈಸೂರು ಮತ್ತು ರಂಗಮಯೂರಿ ಸುಳ್ಯ ಇವರಿಂದ ನ್ರತ್ಯ ವೈಭವ ನಡೆಯಿತು.
ಕೆವಿಜಿಯವರ ಶೈಕ್ಷಣಿಕ ಕ್ರಾಂತಿ ಇತರಿಗೆ ಮಾದರಿ : ಕು.ಭಾಗೀರಥಿ ಮುರುಳ್ಯ



































