ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಪಡ್ಪು ಶ್ರೀ ಮಹಾವಿಷ್ಣು ಮೂರ್ತಿ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ದ. 26ರಂದು ಕುತ್ತಿ ಪೂಜೆ ಮತ್ತು ದ. 27ರಂದು ಬೆಳಿಗ್ಗೆ ವೈಭವದ ಹಸಿರುವಾಣಿ ಮೆರವಣಿಗೆ ನಡೆಯಿತು.
ದ. 26ರಂದು ರಾತ್ರಿ ಉಪೇಂದ್ರ ಆಚಾರ್ಯ ಮಂಡೆಕೋಲು ಇವರ ನೇತೃತ್ವದಲ್ಲಿ ಕುತ್ತಿ ಪೂಜೆ ನಡೆಯಿತು. ದ. 27ರಂದು ಬೆಳಿಗ್ಗೆ ಗಣಪತಿ ಹವನ ನಡೆದು ಬಳಿಕ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯಿಂದ ಪಡ್ಪು ದೈವಸ್ಥಾನದ ತನಕ ವೈಭವದ ಹಸಿರುವಾಣಿ ಮೆರವಣಿಗೆ ನಡೆ ಯಿತು. ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಿದರು.
ತೊಡಿಕಾನ ಗ್ರಾಮದ ವಿವಿಧ ಬೈಲುಗಳಿಂದ ಸಂಗ್ರಹಿಸಿದ ಹಸಿರುವಾಣಿ ದೇವಸ್ಥಾನದ ಆವರಣದಲ್ಲಿ ಸಂಗ್ರಹಗೊಂಡು ಬಳಿಕ ಅಲ್ಲಿಂದ ವಾಹನ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಭಜನೆ, ಕುಣಿತ ಭಜನೆ, ಸಿಡಿಮದ್ದು ಮೆರವಣಿಗೆಗೆ ಮೆರುಗು ನೀಡಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಾಳಿಕಜೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ಕೆ ನಾರಾಯಣ, ಗೌರವಾಧ್ಯಕ್ಷ ಪದ್ಮಯ ಗೌಡ ಪಡ್ಪು, ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಪಡ್ಪು , ಉಪಾಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ಜಗದೀಶ್ ಬಾಳೆಕಜೆ, ಕೋಶಾಧಿಕಾರಿ ರವೀಂದ್ರ ಪಂಜಿಕೋಡಿ, ಜೊತೆ ಕಾರ್ಯದರ್ಶಿ ಆನಂದ ಕಲ್ಲಗದ್ದೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ದೀಪಕ್ ಕುತ್ತಮೊಟ್ಟೆ, ಕೆ.ಕೆ.ಬಾಲಕೃಷ್ಣ ಕುಂಟುಕಾಡು ವೆಂಕಟ್ರಮಣ ಪೆತ್ತಾಜೆ, ಎಮ್ ಎಲ್ ನಾರಾಯಣ, ತಿಮ್ಮಯ್ಯ ಮೆತಡ್ಕ, ಗೋಪಾಲಕೃಷ್ಣ ಗುಂಡಿಗದ್ದೆ, ದಾಮೋದರ ಮಣಿಮುಂಡ, ಸಂತೋಷ್ ಚಿಟ್ಟನೂರು, ಉಮಾಶಂಕರ್ ಅಡ್ಯಡ್ಕ, ಮಿಥುನ್ ಹಾಸ್ತಾರೆ, ನಾಗೇಶ್ ಶೆಟ್ಟಿ ಅಡ್ಯಡ್ಕ, ಗೋವರ್ಧನ್ ಬೊಳ್ಳೂರು, ಮೋನಪ್ಪ ಬಾಳೆಕಜೆ, ಮಾಲತಿ ಭೋಜಪ್ಪ, ಚಂದ್ರಕಲಾ ಕುತ್ತಮೊಟ್ಟೆ, ಪೂಜಾ ಸಂತೋಷ್, ಅಮ್ಮಣ್ಣಿ ಚಿಟ್ಟನ್ನೂರು, ಭರತ್ ಬಾಳೆಕಜೆ, ಶಿವಪ್ಪ ಬಿಳಿಯಾರು, ಚಿನ್ನಪ್ಪ ಡ್ರೈವರ್, ಸುಂದರ ಬಾಜಿನಡ್ಕ, ಸತೀಶ್ ಚಿಟ್ಟನೂರು,ಭವಿತ್ ಬಾಳೆಕಜೆ ಮತ್ತಿತರರು ಉಪಸ್ಥಿತರಿದ್ದರು .



































