ಅಂತರ್ ರಾಜ್ಯ ಸಾಂಸ್ಕೃತಿಕ ಕಾರ್ಯಕ್ರಮ ವಿನಿಮಯ ಸಿ.ಸಿ.ಆರ್.ಟಿ ಬಳಗದ ಮುಖ್ಯ ಉದ್ದೇಶ : ಶೀತಲ್ ಯು.ಕೆ

ಸಿ.ಸಿ.ಆರ್.ಟಿ ಬಳಗ ಸುಳ್ಯದಲ್ಲಿ ಶಿಕ್ಷಕ ಚಿನ್ನಪ್ಪ ಗೌಡರ ಮುಂದಾಳತ್ವದಲ್ಲಿ ಪರಿಣಾಮಕಾರಿಯಾಗಿ ತನ್ನ ಚಟುವಟಿಕೆ ನಿರ್ವಹಿಸುತ್ತಿದ್ದು ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳುವುದು ಸಿ.ಸಿ.ಆರ್‌.ಟಿ.ಬಳಗದ ಮೂಲ ಉದ್ದೇಶ ಎಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ ಹೇಳಿದರು.
ಸಿ. ಸಿ.. ಆರ್.ಟಿ ಬಳಗ ಸುಳ್ಯ ಇದರ ನೇತೃತ್ವದಲ್ಲಿ ಶ್ರೀ ಸುಬ್ರಹ್ಮಣೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ಇದರ ಸಂಯುಕ್ತ ಆಶ್ರಯದಲ್ಲಿ ಜ.1ರಂದು ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ಝೇಂಕಾರ
ಅಂತರರಾಜ್ಯ ಸಂಗೀತ ಹಬ್ಬ
ಸಾಂಪ್ರದಾಯಿಕ ಹಾಗೂ ನವೀನ ಸಂಗೀತ ವಾದ್ಯಗಳ ಪರಿಚಯ ಕಾರ್ಯಕ್ರಮವನ್ನು‌ ಉದ್ಘಾಟಿಸಿ ಅವರು ಮಾತನಾಡಿದರು.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲ್ ಮಾತನಾಡಿ ಸಿ.ಸಿ.ಆರ್.ಟಿ ಅಧ್ಯಕ್ಷ ಚಿನ್ನಪ್ಪ ಗೌಡರ ನಾಯಕತ್ವದಲ್ಲಿ ಪ್ರತಿ ವರ್ಷ ಸಾಂಸ್ಕೃತಿಕ ಹಬ್ಬವನ್ನು ನಡೆಸುತ್ತಿದ್ದಾರೆ‌.ಈ ಕೆಲಸ ಶ್ಲಾಘನೀಯವಾದುದು.ಇತ್ತೀಚಿನ‌ ದಿನಗಳಲ್ಲಿ ಸಂಗೀತಗಳು ಮನಸ್ಸನ್ನು ಕೆರಳಿಸುತ್ತಿವೆ.ಸಂಗೀತಗಳು ಮನಸ್ಸನ್ನು ಕೆರಳಿಸುವ ಕೆಲಸ ಮಾಡಬಾರದು ಮನಸ್ಸನ್ನು ಅರಳಿಸುವ ಕೆಲಸ ಮಾಡಬೇಕು.ಸಂಗೀತ,ಸಾಹಿತ್ಯ,ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಉತ್ರಮ ಸಂಸ್ಕಾರ ದೊರೆಯುತ್ತದೆ ಎಂದು ಹೇಳಿದರು.
ಸಿ.ಸಿ.ಆರ್.ಟಿ ಅಧ್ಯಕ್ಷ ಚಿನ್ನಪ್ಪ‌ ಗೌಡ ಮಾತನಾಡಿ ಸಾಂಪ್ರದಾಯಿಕ ಸಂಗೀತ ಉಪಕರಣ ಬಳಸಿಕೊಂಡು ಸಂಗೀತ ನುಡಿಸಲು ರಾಜ್ಯದ ವಿವಿಧ ಭಾಗಗಳ ಕಲಾವಿದರಿಗೆ ಅವಕಾಶ ಮಾಡಿಕೊಡಲು ಯೇಂಕಾರ ಕಾರ್ಯಕ್ರಮ ಇಂದು ಹಮ್ಮಿಕೊಳ್ಳಲಾಗಿದೆ.ಇದರ ಸದುಪಯೋಗ ಪಡೆದುಕೊಳ್ಳಿ. ಈ ಹಿಂದೆ ಸುಳ್ಯ ತಾಲೂಕಿನ‌ ವಿವಿಧ ಭಾಗಗಳಲ್ಲಿ ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸುಬ್ರಹ್ಮಣ್ಯೇಶ್ವರ ಪ್ರಥಮ‌ ದರ್ಜೆ ಕಾಲೇಜು ಸುಬ್ರಹ್ಮಣ್ಯ ಇದರ
ನಿವೃತ್ತ ಪ್ರಾಚಾರ್ಯರ ಮನಮಹೋನ ಮುಡೂರು,ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಲೀಲಾ ಮನಮೋಹನ,ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರ ಸೋಮಶೇಖರ, ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕಿ ನಂದಾ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ವಿ.ಎಸ್,ಸಮಾಜ ಸೇವಕ ರವಿ ಕಕ್ಕೆಪದವು,ಕೃಷ್ಣ ಭಟ್,ರಾಮಕೃಷ್ಣ ಹೊಳ್ಳಾರ್ , ಸಿ.ಸಿ‌.ಆರ್.ಟಿ ಸದಸ್ಯರಾದ ಉದಯಕುಮಾರ್,ಶ್ರೀಧರ್,ಮಾದವ ಮೂಕಮಲೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿ.ಸಿ.ಆರ್‌.ಟಿ ಕಾರ್ಯದರ್ಶಿ ಕೇಶವ ಸಿ.ಕೆ ವಂದಿಸಿದರು.ಉಪನ್ಯಾಸಕಿ ಕಾರ್ಯಕ್ರಮ ನಿರೂಪಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

.ಬಳಿಕ ಸಂಗೀತ ಕಾರ್ಯಕ್ರಮ ನಡೆಯಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top