ಸಂಪಾಜೆ ಗ್ರಾಮ ಪಂಚಾಯತ್ ಸ್ವಚ್ಛತಾ ವ್ಯಕ್ತಿ ಮೇಲೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿದ ಘಟನೆ ಜ 10ರಂದು ವರದಿಯಾಗಿದೆ.
ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾಗ ಹೊರ ಠಾಣಾ ಬಳಿ ಸ್ಥಳೀಯರು ಅವರನ್ನು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದರು.
ಪುತ್ತೂರು ಭಾಗದಿಂದ ಆಟೋ ರಿಕ್ಷಾದಲ್ಲಿ ಬಂದಿದ್ದ ಇಬ್ಬರು ಕಡೆಪಾಲ ಬಳಿ ಹಲ್ಲೆ ನಡೆಸಿದ್ದಾರೆ. ಸ್ಥಳೀಯರು ಬೋಜಪ್ಪರವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಹಲ್ಲೆಯಾದ ಮಾಹಿತಿ ಸಹಾಗೂ ಕಲ್ಲುಗುಂಡಿ ಪೊಲೀಸ್ ಉಪಠಾಣೆ ಬಳಿ ಜಮಾಯಿಸಿದ್ದಾರೆ. ವಿಕಲಾಂಗರಾದ ಬೋಜಪ್ಪನಿಗೆ ಅಲ್ಲಿಂದ ಓಡಲು ಸಾಧ್ಯವಾಗದೆ ಬೊಬ್ಬೆ ಹೊಡೆದಾಗ ಸ್ಥಳೀಯ ನಿವಾಸಿಗಳು ಬರುವುದನ್ನು ಕಂಡು ಹಲ್ಲೆಕೋರರು ಆಟೋ ದೊಂದಿಗೆ ಪರಾರಿಯಾಗಿದ್ದು ನಂತರ ಪತ್ತೆಹಚ್ಚಲಾಗಿದೆ.
ಸಂಪಾಜೆ : ಗ್ರಾಮ ಪಂಚಾಯತ್ ಸ್ವಚ್ಚತಾ ವ್ಯಕ್ತಿಗೆ ಹಲ್ಲೆ

















