ಅರಂತೋಡು ಸ್ವಾಮಿ ಕೊರಗಜ್ಜ ದೈವಸ್ಥಾನ ಕೊಡಂಕೇರಿಯಲ್ಲಿ ದಿನಾಂಕ 14-01-2026 ರ ಮಕರ ಸಂಕ್ರಮಣದಂದು ಕಲಶ ಸೇವೆ ಇರುವುದು. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ *ಅನ್ನಸಂತಪ್ರಣೆ ರಾತ್ರಿ ಗಂಟೆ 7:30ಕ್ಕೆ* ನಡೆಯಲಿದೆ.ಈ ದಿವಸ ಅಗೇಲು ಸೇವೆ ಇರುವುದಿಲ್ಲ.ಹಾಗೂ ಶ್ರೀ ಮಿತ್ತೂರು ಉಳ್ಳಾಕುಲು ಮಕ್ಕಳ ಕುಣಿತ ಭಜನೆ ತಂಡ, ಅಮೈಮಡಿಯಾರು ಉಬರಡ್ಕ ಮಿತ್ತೂರು ಮತ್ತುಶ್ರೀ ಮಿತ್ತೂರು ಉಳ್ಳಾಕುಲು ಮಹಿಳಾ ಭಜನಾ ಮಂಡಳಿ ಅಮೈಮಡಿಯಾರು ಉಬರಡ್ಕ ಮಿತ್ತೂರು ಇವರಿಂದ ಕುಣಿತ ಭಜನೆ ಸಂಜೆ ಗಂಟೆ 6:15 ರಿಂದ 7:30 ರ ವರೆಗೆ ನಡೆಯಲಿದೆ. ಭಕ್ತಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ಅರಂತೋಡು : ಜ.14ಕ್ಕೆ ಕೊಡಂಕೇರಿ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಕಲಶ ಸೇವೆ ಮತ್ತು ಕುಣಿತ ಭಜನೆ



































