ಕೆ.ಎಸ್.ಆರ್.ಟಿ.ಸಿಯವರು ಮೆಸ್ಕಾಂ ಗೆ ಮುಂಗಡ ಹಣ ಪಾವತಿಸದ ಕಾರಣ ಜ.13ರಂದು ರಾತ್ರಿ 8 ಗಂಟೆಯ ತನಕ ಮೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿ,ಡಿಪೋ ಮ್ಯಾನೇಜರ್ ಅವರ ವಿನಂತಿ ಮೇರೆಗೆ ಮತ್ತೆ ವಿದ್ಯುತ್ ಸಂಪರ್ಕ ನೀಡಿದೆ.
ಕೆ.ಆರ್.ಟಿ.ಸಿಯವರು ಮೆಸ್ಕಾಂಗೆ ವಿದ್ಯುತ್ ಬಿಲ್ ಮಂಗಡ ಪಾವತಿಸದ ಕಾರಣದಿಂದಾಗಿ ಮೆಸ್ಕಾಂ ಸಿಬ್ಬಂದಿಗಳು ಇಂದು ಪೀಸ್ ಕಳಚಿಕೊಂಡು ಹೋಗಿದ್ದರು. ಇದರಿಂದ ಪ್ರಯಾಣಿಕರು ಕತ್ತಲಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. .ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ಅವರು ಸಂಬಂಧಪಟ್ಟ ಅಧಿಕಾರಿಯನ್ನು ಸಂಪರ್ಕಿಸಿ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದ್ದು ವಿದ್ಯುತ್ ಸಂಪರ್ಕ ನೀಡುವಂತೆ ವಿನಂತಿಸಿಕೊಂಡಿದ್ದರು.ಬಳಿಕ ಬಸ್ಸು ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕ ನೀಡಲಾಯಿತು.
ಕತ್ತಮಯವಾದ ಸುಳ್ಯ ಕೆ.ಎಸ್.ಆರ್.ಟಿ ಸಿ ಬಸ್ಸು ನಿಲ್ದಾಣಕ್ಕೆ ಮತ್ತೆ ಬಂತು ವಿದ್ಯುತ್



































