ಲಾರಿ‌ ಸ್ಕೂಟಿ ಅಪಘಾತದಲ್ಲಿ‌ ಪೆರಂಗೋಡಿ ಮನೆಯ ನಿಶಾಂತ್ ಮೃತ್ಯು

ಕೊಯನಾಡು ಗಣಪತಿ ಗುಡಿ ಸಮೀಪ ಸ್ಕೂಟಿ ಮತ್ತು ಟ್ಯಾಂಕರ್ ನಡುವೆ ಅಪಘಾತವಾಗಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ಜ.13ರಂದು ವರದಿಯಾಗಿದೆ.
ಮೃತಪಟ್ಟ ಸ್ಕೂಟಿ ಸವಾರ ಕೊಯನಾಡು ಪೆರಂಗೋಡಿ ಮನೆಯ ದಿ.ದೇವರಾಜ ಅವರ ಮಗ ನಿಶಾಂತ್ (30) ಎಂದು ಗುರುತಿಸಲಾಗಿದೆ‌.
ಸುಳ್ಯ ಕಡೆಯಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಟ್ಯಾಂಕ‌ರ್ ನ ಹಿಂಬಾಗಕ್ಕೆ ಸ್ಕೂಟಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ಗಂಭೀರ ಗಾಯಗೊಂಡಿದ್ದು ಗಾಯಾಳುವನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸ್ಕೂಟಿ ಸವಾರ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಯುವಕನ ಮನೆಯ ಸುಮಾರು 200 ಮೀಟರ್ ಅಂತರದಲ್ಲಿ‌ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮ್ರತ ಯುವಕನ‌ ಸಹೋದರ ಜೀವಿತ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇವರನ್ನು ಹಾಗೂ ತಾಯಿ ಸೀತಮ್ಮರನ್ನು ಅಗಲಿದ್ದಾರೆ.ಜ.14ರಂದು ಸಹೋದರ ಜೀವಿತ್ ಆಗಮಿಸಿ ಅಂತಿಮ ವಿಧಿ ವಿಧಾನ ನಡೆಸಲಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top