ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಮಕರ ಜ್ಯೋತಿಯ ಅದ್ಭುತ ದರ್ಶನವಾಯಿತು. ಸಂಜೆ ಸುಮಾರು 6.30ರಿಂದ 6.45ರ ಸುಮಾರಿಗೆ ಪೊನ್ನಂಬಲಮೇಡುವಿನಲ್ಲಿ ಗೋಚರಿಸಿದ ಜ್ಯೋತಿಯನ್ನು ಕಂಡು ಲಕ್ಷಾಂತರ ಅಯ್ಯಪ್ಪ ಭಕ್ತರು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಘೋಷಣೆಯೊಂದಿಗೆ ಭಕ್ತಿ ಪರವಶರಾದರು. ಪ್ರತಿ ವರ್ಷದಂತೆ ಈ ಬಾರಿಯೂ ಶಬರಿಗಿರಿಯಲ್ಲಿ ದೈವಿಕ ಕಳೆ ತುಂಬಿದ್ದು, ಭಕ್ತಗಣವು ಈ ಪವಿತ್ರ ಕ್ಷಣವನ್ನು ಕಣ್ಣುಂಬಿಕೊಂಡು ಪುನೀತರಾದರು.
ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಪಡೆದ ಅಯ್ಯಪ್ಪ ಭಕ್ತರು

















