ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಷತೆಯಲ್ಲಿ ಜ.17ರಂದು ಗ್ರಾಮ ಪಂಚಾಯತ್ ಗ್ರಾಮ ಸ್ವರಾಜ್ ಸಭಾಂಗಣದಲ್ಲಿ ಜರುಗಿತು.
ಸಭೆಯಲ್ಲಿ ಗ್ರಾಮಸ್ಥರಿಗೆ ಆರಂತೋಡು ಪೇಟೆಯಲ್ಲಿ ಏಕೈಕ ಹಸಿ ಮೀನು ಮಾರುಕಟ್ಟೆ ಇರುವುದರಿಂದ ಸಮಸ್ಯೆಯಾಗಿ, ಮೌಕಿಕವಾಗಿ ಅನೇಕ ದೂರುಗಳ ಬಂದ ಹಿನ್ನಲೆಯಲ್ಲಿ ಇನ್ನೆರಡು ಹಸಿ ಮೀನು ಮಾರುಕಟ್ಟೆ ಸ್ಟಾಲ್ ಗಳ ನಿರ್ಮಾಣ ಮಾಡುವುದೆಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು.ಸಭೆಯಲ್ಲಿ ರಸ್ತೆಗಳ ದುರಸ್ಥಿ,ದಾರಿ ದೀಪ ದುರಸ್ಥಿ ಮುಂತಾದ ಗಂಭೀರ ಸಮಸ್ಯೆಗಳ ಬಗ್ಗೆ ಪಂಚಾಯತ್ ಸದಸ್ಯರು ಚರ್ಚೆ ನಡೆಸಿದರು. ಹಾಗೂ ತೆರಿಗೆ ಸಂಗ್ರಹದಲ್ಲಿ ಒಂದು ತಿಂಗಳಲ್ಲಿ ಗಣನೀಯ ಸಾಧನೆ ಮಾಡಿದ ಸಿಬ್ಬಂದಿಗಳಿಗೆ ಸಭೆ ಅಭಿನಂದನೆ ಸಲ್ಲಿಸುವುದರೊಂದಿಗೆ, ಮುಂದಿನ ತಿಂಗಳ 16ರಂದು ಈಗಿನ ಆಡಳಿತ ಸಮಿತಿ ಅಧಿಕಾರ ಅವಧಿ ಮುಗಿಯುವುದರೊಳಗಾಗಿ 100% ಸಾಧನೆ ಮಾಡಿದರೆ ಸಿಬ್ಬಂದಿಗಳಿಗೆ ವಿಶೇಷ ಪುರಸ್ಕಾರ ನೀಡುವುದೆಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಸುಳ್ಯ ತಾಲೂಕು ರಚನೆಯಾಗಿ 60ರ ಷಷ್ಠಬ್ದ ಕಾರ್ಯಕ್ರಮದಲ್ಲಿ ಎಲ್ಲಾ ಆಡಳಿತ ಸಮಿತಿ ಸದಸ್ಯರು ಪಂಚಾಯತ್ ವ್ಯಾಪ್ತಿಯ ಎಲ್ಲಾ ಸಂಘ, ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಭಾಗವಹಿಸುವುದೆಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಭವಾನಿ ಚಿಟ್ಟನೂರು, ಪಂಚಾಯತ್ ಸದಸ್ಯರುಗಳಾದ ಶಿವಾನಂದ ಕುಕ್ಕುಂಬಳ, ವೆಂಕಟರಮಣ ಪೆತ್ತಾಜೆ, ರವೀಂದ್ರ ಪೂಜಾರಿ ಪಂಜಿಕೋಡಿ, ಗಂಗಾಧರ ಗುಂಡ್ಲಬನ, ಪುಷ್ಪಾಧರ ಕೊಡಂಕೇರಿ,ಶಶಿಧರ ದೊಡ್ಡಕುಮೇರಿ, ಶ್ವೇತಾ ಅರಮನೆಗಯಾ, ಮಾಲಿನಿ ಉಳುವಾರು, ಹರಿಣಿ ದೇರಾಜೆ, ಸುಜಯಾ ಮೇಲೆಅಡ್ತಲೆ, ಸರಸ್ವತಿ ಬಿಳಿಯಾರು, ವಿನೋದ ತೋಡಿಕಾನ ಮತ್ತು ಉಷಾ ಅದ್ಯಡ್ಕ ಉಪಸ್ಥಿತರಿದ್ದರು. ಗ್ರಾಮಪಂಚಾಯಿತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್. ಎಂ. ಆರ್. ಎಲ್ಲರನ್ನೂ ಸ್ವಾಗತಿಸಿ, ಸರಕಾರದ ಸುತ್ತೋಲೆಗಳನ್ನು ಮಂಡಿಸಿದರು. ಪಂಚಾಯತ್ ಮತ್ತು ಸ್ವಚ್ಛತಾ ಘಟಕ ಸಿಬ್ಬಂದಿಗಳು ಸಹಕರಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top