ಯುವಜನತೆಯ ಪ್ರತಿಭೆಗನ್ನು ಅರಳಿಸುವ ಕೆಲಸವನ್ನು ಜನಪ್ರತಿಧಿ ಸರಕಾರ ಮಾಡಬೇಕು : ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್

ಯುವಜನತೆಯ ಪ್ರತಿಭೆಗನ್ನು ಅರಳಿಸುವ ಕೆಲಸವನ್ನು ಜನಪ್ರತಿಧಿ ಸರಕಾರ ಮಾಡಬೇಕು ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದರು .ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ(ರಿ)ಮಂಗಳೂರು ಇದರ ಸಹಯೋಗದೊಂದಿಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಜನ ಸಂಯುಕ್ತ ಮಂಡಳಿ( ರಿ) ಸುಳ್ಯ ಸುಳ್ಯ ತಾಲೂಕು ಇವರ ಆಶ್ರಯದಲ್ಲಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ‌ ರಾಜ್ಯ ಮಟ್ಟದ ಯುವ ಸಂಭ್ರಮದ ಅಂಗವಾಗಿ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿ‌ ಅವರು‌ ಮಾತನಾಡಿದರು.
ಅನೇಕ ಆಚರಣೆಗಳು ಸಂಸ್ಕೃತಿಗಳು ನಶಿಸಿ ಹೋಗುವ ಹಂತದಲ್ಲಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕೆಸಲ ಆಗಬೇಕು.ಕೆಲವೊಂದು ಸಂಸ್ಕೃತಿಗಳು ನಮ್ಮ ನಂಬಿಕೆ ಮೇಲೆ ಉಳಿದುಕೊಂಡಿವೆ ಎಂದು ಹೇಳಿದರು.
ಯುವ ಸಂಭ್ರಮ ಸಂಘಟನಾ ಸಮಿತಿ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಅಧ್ಯಕ್ಷತೆ ವಹಿಸಿದ್ದರು.
ಧರ್ಮದರ್ಶಿ ರಾಜೇಶನಾಥ ಜೀ ವಸ್ತುಮೇಳ ಉದ್ಘಾಟಿಸಿದರು.ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕ ಎಸ್.ಎ ಮನ್ಮಥ ವಾಹನ‌ ಮೇಳ ಉದ್ಘಾಟಿಸಿದರು‌
ಕೃಷಿ ಮೇಳವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಉದ್ಘಾಟಿಸಿದರು.
ಆಹಾರ ಮೇಳವನ್ನು ಪಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಉದ್ಘಾಟಿಸಿದರು.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಜಳಕದಹೊಳೆ, ಪಂಜ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರೀ, ಪಂಜ ಲಯನ್ಸ್‌ ಕ್ಲಬ್ ಅಧ್ಯಕ್ಷ ನಾಗೇಶ ಕಿನ್ನಿಕುಮೇರಿ, ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಕೆ.ಎಂ.ಎಫ್. ನಿರ್ದೇಶಕ ಭರತ್ ನೆಕ್ರಾಜೆ, ಉದ್ಯಮಿ ವಿಜಯ ಕುಮಾರ್ ಸೊರಕೆ, ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಯುವಜ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಪ್ರಸ್ತಾವಿಕವಾಗಿ ಮಾತನಾಡಿದರು.
ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ಸೂಡಿಮುಳ್ಳು, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಗೌರವಾಧ್ಯಕ್ಷ ವಿಜಯ ಕುಮಾರ್ ಉಬರಡ್ಕ, ಪ್ರಧಾನ ಕಾರ್ಯದರ್ಶಿ ಮುರಳಿ ನಳಿಯಾರು, ಕೋಶಾಧಿಕಾರಿ ಲೋಹಿತ್ ಬಾಳಿಕಳ, ಯುವ ಸಂಭ್ರಮ ಸಂಘಟನಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಜಾಕೆ ಮಾದವ ಗೌಡ ವಂದಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top