ಸುಳ್ಯ ತಾಲೂಕಿನ ಅಡ್ತಲೆ ಮರ್ಕಂಜ – ರಸ್ತೆಯಲ್ಲಿ ಜ.20ರಂದು ಸಂಜೆ ಕಾಡಾನೆಗಳು ರಸ್ತೆ ದಾಟಿದ ಘಟನೆ ವರದಿಯಾಗಿದೆ.
ಕೆಲ ಸಮಯಗಳಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ಆನೆಗಳು ಸಂಜೆಯಾಗುತ್ತಲೇ ಕಾಡು ಬಿಟ್ಟು ನಾಡಿಗೆ ಇಳಿಯುತ್ತಿವೆ. ಕಾಡಿನಂಚಿನ ತೋಟಗಳಿಗೆ ನುಗ್ಗುತ್ತಿರುವ ಕಾಡನೆಗಳ ಹಿಂಡು ಅಪಾರ ಕೃಷಿ ಹಾನಿ ಮಾಡುತ್ತಿವೆ.
ಇಂದು ಸಂಜೆ 6.50ರ ಅಡ್ತಲೆ ಮರ್ಕಂಜ ರಸ್ತೆಯನ್ನು ಅಡ್ಡ ದಾಟಿವೆ.ಯಾವುದೇ ಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಡ್ತಲೆ ಮರ್ಕಂಜ ರಸ್ತೆಯಲ್ಲಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು

















