ತೊಡಿಕಾನ ಶಾಲೆ ನಮಗೆ ವಿದ್ಯೆಯೊಂದಿಗೆ ಸಂಸ್ಕಾರ ಕಲಿಸಿಕೊಟ್ಟಿದೆ : ಸಂತೋಷ್ ಕುತ್ತಮೊಟ್ಟೆ

ತೊಡಿಕಾನ ಶಾಲೆ ನಮಗೆ ವಿದ್ಯೆಯೊಂದಿಗೆ ಸಂಸ್ಕಾರ ಪಾಠ ಕಲಿಸಿ ಕೊಟ್ಟಿದೆ ಎಂದು ತೊಡಿಕಾನ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಮೃತಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ
ಸಂತೋಷ್ ಕುತ್ತಮೊಟ್ಟೆ ಹೇಳಿದರು.
ಶಾಲೆಯ ಅಮೃತಮಹೋತ್ಸವ ಸಮಾರಂಭದ ಅಂಗವಾಗಿ ಜ.22ರಂದು ಶಾಲಾ ವಠಾರದಲ್ಲಿ ಹಿರಿಯ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ತನ್ನ ಪ್ರಾಥಮಿಕ ಶಾಲಾ ಜೀವನದ ಸವಿನೆನಪುಗಳನ್ನು ಅವರು ಹಂಚಿಕೊಂಡರು.
ಈ ಶಾಲೆಯ ಶಿಕ್ಷಕರು ಕಲಿಸಿಕೊಟ್ಟ ಪ್ರಾಥಮಿಕ ಶಿಕ್ಷಣದಿಂದ ಸಂಸ್ಕಾರದಿಂದ ನಾವು ಸಮಾಜದಲ್ಲಿ ಈ ಹಂತಕ್ಕೆ ಬರಲು‌ ಸಾಧ್ಯವಾಯಿತು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿ ತನ್ನ ಪ್ರಾಥಮಿಕ ವಿದ್ಯಾರ್ಥಿ ಜೀವನವನ್ನು ಸಂವಾದದಲ್ಲಿ ಹಂಚಿಕೊಂಡರು.
ಹಿರಿಯ ವಿದ್ಯಾರ್ಥಿಗಳಾದ ಪತ್ರಕರ್ತ ರಾಧಾಕೃಷ್ಣ ಕಲ್ಲಪಳ್ಳಿ ನಿವೃತ್ತ ಪೋಲೀಸ್ ಅಧಿಕಾರಿ ಸುಕುಮಾರ ಅಡ್ಯಡ್ಕ, ಕೃಷಿಕರಾದ ಕೇಶವ ಪ್ರಸಾದ್ ತೊಡಿಕಾನ, ಪತ್ರಕರ್ತರಾದ , ಉಮಾಶಂಕರ ಎ.ಜಿ, ಭವಾನಿ ಟೀಚ‌ರ್, ಗೌರಿ ಭಟ್ ಟೀಚರ್, ಗೌತಮಿ, ಮೇಧಾ, ಜನಾರ್ದನ ಬಾಳೆಕಜೆ ತಮ್ಮ ತಮ್ಮ ನೆನಪುಗಳನ್ನು‌ ಸಂವಾದದಲ್ಲಿ ಮುಂದಿಟ್ಟರು.
ಈ ಸಂವಾದಲ್ಲಿ ಆಂಗ್ಲ ಮಾಧ್ಯಮ ಆರಂಭಿಸಬೇಕು ಎಂದು ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಒತ್ತಾಯಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಚಿದಾನಂದ ಯು.ಎಸ್. ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲೆಯ ಮುಖ್ಯೋಪಾಧ್ಯಾಯ ಅರುಣ್ ಕುಮಾರ್, ಎಸ್‌.ಡಿ.ಎಂ.ಸಿ. ಅಧ್ಯಕ್ಷ ನವೀನ ಅಮ್ಮೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರೀಡಾ ಸಂಚಾಲಕ ಉಮಾಶಂಕರ ಎ.ಜಿ ಸ್ವಾಗತಿಸಿದರು. ಉಪನ್ಯಾಸಕಿ ಕು. ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು. ವಿಜೇತ್ ಮರುವಳ ವಂದಿಸಿದರು.ಕು.ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.ನೂರಾರು ಮಂದಿ ಹಿರಿಯ ವಿದ್ಯಾರ್ಥಿಗಳು ಶಿಕ್ಷಕರು,ಊರವರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top