ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಾತ್ರೋತ್ಸವಕ್ಕೆ ಜ.24 ಶನಿವಾರ ದಂದು ಮುಂಜಾನೆ 10 ರಿಂದ ಅಂಗಡಿ ಸ್ಥಳ ಬಹಿರಂಗ ಏಲಂ ನಡೆಯಲಿದೆ.
ಮಧ್ಯಾಹ್ನ ಗಂಟೆ 3 ಕ್ಕೆ ಲೈಟಿಂಗ್ಸ್- ಸೌಂಡ್ಸ್, ಶಾಮಿಯಾನ, ದಿನಸಿ ಸಾಮಗ್ರಿಗಳಿಗೆ ಪ್ರತ್ಯೇಕವಾಗಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಪಾಲ್ಗೊಳ್ಳುವವರು ಮುಚ್ಚಿದ ಲಕೋಟೆಯಲ್ಲಿ ಟೆಂಡರ್ ಅರ್ಜಿ ಅಧ್ಯಕ್ಷರಿಗೆ ನೀಡುವುದು. ಬಳಿಕ ಟೆಂಡರ್ ದಾರರ ಸಮಕ್ಷಮದಲ್ಲಿ 3.30ಕ್ಕೆ ಟೆಂಡರ್ ಅರ್ಜಿ ತೆರೆಯಲಾಗುತ್ತದೆ ಎಂದು ದೇವಳದ ಪ್ರಕಟಣೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.
ಜ.24ಕ್ಕೆ ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಾತ್ರೋತ್ಸವಕ್ಕೆ ಅಂಗಡಿ ಸ್ಥಳ ಬಹಿರಂಗ ಏಲಂ

















