ಸುಳ್ಯ : ಸಂಭ್ರಮ ಸಡಗರದಿಂದ ನಡೆದ ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವರ್ಷದ ವಾರ್ಷಿಕೋತ್ಸವ “ಉತ್ಕರ್ಷ್ 2026

ಸುಳ್ಯದಲ್ಲಿರುವ ಅಂಜಲಿ ಮಾಂಟೆಸ್ಸರಿ ಶಾಲೆಯ 4ನೇ ವಾರ್ಷಿಕೋತ್ಸವ “ಉತ್ಕರ್ಷ್ 2026” ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್. ಗಂಗಾಧರ್ ಅವರು ಭಾಗವಹಿಸಿ ಶಾಲಾ ಪೋಷಕರಿಗೆ ಉತ್ತಮವಾದ ಸಂದೇಶವನ್ನು ನೀಡಿದರು. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದರು ಗೌರವಾನ್ವಿತ ಅತಿಥಿಗಳಾಗಿ ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ, ವೆಂಕಟರಮಣ ಸಹಕಾರಿ ಸಂಘ ಸುಳ್ಯದ ಸಿಇಒ ಶ್ರೀ ಕೆ.ಟಿ. ವಿಶ್ವನಾಥ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರಾದ ಶ್ರೀ ಶುಭಕರ ಬಿ.ಸಿ. ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಅಂಜಲಿ ಮಾಂಟೆಸ್ಸರಿ ಶಾಲೆಯ ಸಂಚಲಕರಾದ ಶ್ರೀಮತಿ ಗೀತಾಂಜಲಿ ಟಿ.ಜಿ. ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಪುಟಾಣಿಗಳ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು. ಸ್ವಾಗತ ಭಾಷಣವನ್ನು ಬೇಬಿ ಆಯಿಶಾ ಸಾಜ್ನಾ ಅವರು ನೆರವೇರಿಸಿದರು. ಮಾಸ್ಟರ್ ಶುಕೃತ್ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಫಬಿದಾ ಅವರು ನಡೆಸಿಕೊಟ್ಟರು. “ಏಕತೆಯಲ್ಲಿ ವೈವಿಧ್ಯತೆ” ಮತ್ತು “ಸರ್ವ ಧರ್ಮ ಸಮಭಾವ” ಎಂಬ ಸಂದೇಶವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನ ಸೆಳೆದವು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top