ಅಖಿಲ ಭಾರತ ಹುಲಿ ಗಣತಿ-2026ರ ಎರಡನೇ ಹಂತದ ಸಮೀಕ್ಷೆ ಸಂದರ್ಭಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸುತ್ತಿದ್ದ ಸಿಬ್ಬಂದಿಯೊಬ್ಬರ ಮೇಲೆ ಕಾಡುಹಂದಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.
ಉಪ್ಪಿನಂಗಡಿ ವಲಯದ ಮೊಗ್ರು ಅರಣ್ಯ ಬೀಟ್‌ನಲ್ಲಿ ಫೆಬ್ರವರಿ 16ರ ಸೋಮವಾರದಂದು ಎರಡನೇ ಹಂತದ ಸಮೀಕ್ಷಾ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮೊಗ್ರು ಬ್ಲಾಕ್‌ನ ಕಲ್ಲಮಾಡು ಆಲಮಟ್ಟಿ ಪ್ಲಾಂಟೇಶನ್ ಸಮೀಪ ಗಸ್ತು ಅರಣ್ಯ ಪಾಲಕಿಯವರೊಂದಿಗೆ ಸಮೀಕ್ಷೆಗೆ ತೆರಳಿದ್ದ ಅರಣ್ಯ ಇಲಾಖೆಯ ದಿನಗೂಲಿ ನೌಕರ ಶೇಷಪ್ಪ ಎಂಬವರ ಮೇಲೆ ಕಾಡುಹಂದಿಯೊಂದು ದಾಳಿ ನಡೆಸಿ ತಿವಿದೆ.ಘಟನೆಯಲ್ಲಿ ಶೇಷಪ್ಪ ಅವರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಣ್ಯ ಇಲಾಖೆಯ ದಿನಗೂಲಿ ನೌಕರ ಕಾಡು ಹಂದಿ ತಿವಿದು ಗಂಭೀರ

















