ಅಡ್ತಲೆಯಲ್ಲಿ ಕಾಡಾನೆ ಹಾವಳಿಯ ಬಗ್ಗೆ ಡಿ.ಸಿ.ಎಫ್ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಸಲು ಶಾಸಕರಿಗೆ ಮನವಿ

ಅಡ್ತಲೆ ನಾಗರಿಕ ಹಿತಾರಕ್ಷಣಾ ವೇದಿಕೆಯ ನಿಯೋಗ ಸುಳ್ಯ ಶಾಸಕಿ ಭಾಗೀರಥಿ ಅವರ ಕಛೇರಿಯಲ್ಲಿ ಭೇಟಿ ಮಾಡಿ ನಿರಂತರವಾಗಿ ಆಗುತ್ತಿರುವ ಆನೆ ಹಾವಳಿಯ ಕುರಿತು ಸಂಪೂರ್ಣ ವಿಷಯವನ್ನು ಮನವರಿಕೆ ಮಾಡಿ ಶಾಸಕರು ಹಾಗೂ ಡಿ.ಸಿ.ಎಫ್ ನೇತೃತ್ವದಲ್ಲಿ ಅಡ್ತಲೆಯಲ್ಲಿ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ನಡೆಸಲು ಮನವಿ ನೀಡಲಾಯಿತು. ಶಾಸಕರು ಆದಷ್ಟು ಬೇಗ ಅಧಿಕಾರಿಗಳ ಜೊತೆ ಮಾತನಾಡಿ ದಿನ ನಿಗದಿ ಮಾಡಿ ಸಭೆ ನಡೆಸುವ ಕುರಿತು ಒಪ್ಪಿಗೆ ಸೂಚಿಸಿದರು.ಅಲ್ಲದೇ ಮುಂದಿನ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅರಣ್ಯ ಸಚಿವರನ್ನು ನಮ್ಮ ನಿಯೋಗದೊಂದಿಗೆ ಶಾಸಕರು ಭೇಟಿ ಮಾಡಿಸಿ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಲು ಬರಲು ಆಹ್ವಾನಿಸಿದರು. ಕೇಶವ ಅಡ್ತಲೆ,ಕೆ.ಪಿ ಜಗದೀಶ್, ಹರಿಪ್ರಸಾದ್ ಅಡ್ತಲೆ,ವಿನಯ್ ಬೆದ್ರುಪಣೆ,ಸ್ವಾತಿಕ್ ಕಿರ್ಲಾಯ,ಮೋಹನ್ ಪಂಜದಬೈಲು, ರಂಜಿತ್ ಅಡ್ತಲೆ ಹಾಜರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top