ದೇವಚಳ್ಳ : ರೈತರಿಗೆ ಏಣಿ ವಿತರಣೆ

ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿ., ಕೇಂದ್ರ ವಿಟ್ಲ ಇವರ ವತಿಯಿಂದ ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿಕರಿಗೆ ಏಣಿಗಳ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ದೇವಚಳ್ಳ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಅಧಿಕಾರಾವಧಿಯ ಕೊನೆಯ ದಿನವಾದ ಇಂದು, ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯಿಂದ ಲಭ್ಯವಿರುವ ವಿವಿಧ ಕೃಷಿ ಸೌಲಭ್ಯಗಳು, ರೇಷ್ಮೆ ಹಾಗೂ ತಾಳೆ ಕೃಷಿ ಕುರಿತು ಪ್ರಾಥಮಿಕ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಒಟ್ಟು 110 ಜನ ಕೃಷಿಕರಿಗೆ ಏಣಿಗಳನ್ನು ವಿತರಿಸಲಾಯಿತು. ರಾಜೇಶ್ ಬಟ್ಟಕಜೆ ಹಾಗೂ ಶ್ವೇತಾ ಬಟ್ಟಕಜೆ ಅವರ ಸಹಕಾರದಿಂದ ಈ ಸೌಲಭ್ಯಗಳನ್ನು ಗ್ರಾಮಸ್ಥರಿಗೆ ತಲುಪಿಸಲು ಸಾಧ್ಯವಾಯಿತು.
ಗ್ರಾಮ ಪಂಚಾಯತ್ ಮುಖಾಂತರವೇ ವಿತರಣೆ ಕಾರ್ಯ ನಡೆಯುತ್ತಿದೆ ಎಂದು ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು. ಪಿಡಿಒ, ಇಓ ರಾಜಣ್ಣ,
ಮೋಹಿನಿ ವಿಶ್ವನಾಥ್ (ನಿಶಾ) ಸಂಪಾಜೆ, ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಕೃಷಿ ಪತ್ತಿನ ಅಧ್ಯಕ್ಷರಾದ ಜಯರಾಮ ಮೊಗ್ರ, ಗ್ರಾಮ ಪಂಚಾಯಿತಿ ಸದಸ್ಯರಾದ, ಪ್ರೇಮಲತಾ, ರಮೇಶ್, ದುರ್ಗದಾಸ, ಪ್ರಶಾಂತ, ಲೀಲಾವತಿ, ಸರೋಜಿನಿ, ಭವಾನಿ ಶಂಕರ್, ರಾಜೇಶ್ವರಿ, ಪಿಡಿಓ ಅಜಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮದ ಕೃಷಿಕರು, ಪಂಚಾಯತ್ ಸಿಬ್ಬಂದಿಗಳು ಹಾಗೂ ಫಲಾನುಭವಿಗಳು ಸಭೆಯಲ್ಲಿ ಭಾಗವಹಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top