ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಕಾರು ಜಖಂ,ಪ್ರಯಾಣಿಕರಿಗೆ ಗಾಯ

ಸುಳ್ಯ ತಾಲೂಕಿನ ಸುಳ್ಯ ಬೆಳ್ಳಾರೆ ಚೊಕ್ಕಾಡಿ ರಸ್ತೆಯ
ಬೇಂಗಮಲೆಯಲ್ಲಿ ಫೆ.23ರಂದು ಮರವೊಂದು ಚಲಿಸುತ್ತಿರುವ ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣ ಜಖಂಗೊಂಡು ಪ್ರಯಾಣಿಕರು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಘಟನೆ ವರದಿಯಾಗಿದೆ.
ಸುಳ್ಯದ ಉಮ್ಮರ್ ಎಂಬವರ ಸ್ವಿಫ್ಟ್ ಡಿಸೈರ್ ಕಾರಲ್ಲಿ ಸುಳ್ಯ ಸ್ಟೇಟ್ ಬ್ಯಾಂಕ್ ಮೇನೇಜ‌ರ್ ಉತ್ಸವ್ ಚಕ್ರವರ್ತಿ ಹಾಗೂ ಇನ್ನೊಬ್ಬರು ಫೀಲ್ಡ್‌ ಸ್ಟಾಫ್ ಸಾಲ ವಸೂಲಾತಿಗಾಗಿ ಬಾಡಿಗೆ ಕಾರಲ್ಲಿ ಪಂಜ ಕಡೆಗೆ ಹೋಗಿ ಬೆಳ್ಳಾರೆಯಿಂದ ಕಡೆಯಿಂದ ಸುಳ್ಯ ಕಡೆಗೆ ಹಿಂತಿರುಗಿ ಬರುತ್ತಿದ್ದರು. ಬೇಂಗಮಲೆಯಲ್ಲಿ ರಸ್ತೆಬದಿಯಲ್ಲಿದ್ದ ದೊಡ್ಡ ಚೇರೆ ಮರ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿತು. ಕಾರು ನುಜ್ಜುಗುಜ್ಜಾಗಿದೆ. ಕಾರಲ್ಲಿದ್ದ ಪ್ರಯಾಣಿಕರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top