ದ.ಕ ಜಿಲ್ಲೆಯ ಬಾಳೆ ಎಲೆಗೆ ಕೇರಳದಲ್ಲಿ ಭಾರೀ ಬೇಡಿಕೆ

ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬೆಳೆಯುವ ಕದಳಿ ಬಾಳೆ ಎಲೆಗಳಿಗೆ ನೆರೆಯ ಕೇರಳ ರಾಜ್ಯದಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ. ವಿಶೇಷವಾಗಿ ಹಬ್ಬ -ಜಾತ್ರೆ, ಮದುವೆ ಸಮಾರಂಭ ಮತ್ತು ದೇವಸ್ಥಾನಗಳ ಅನ್ನಸಂತರ್ಪಣೆ ಕಾರ್ಯಕ್ರಮ ಗಳ ಸಂದರ್ಭಗಳಲ್ಲಿ ಈ ಬಾಳೆ ಎಲೆಗಳಿಗೆ ಭಾರೀ ಬೇಡಿಕೆ ಇರುತ್ತದೆ.
ಕೇರಳದಲ್ಲಿ ನಡೆಯುವ ವಿಷು ಸಹಿತ ವಿವಿಧ ಹಬ್ಬಗಳು ಹಾಗೂ ದೇವಸ್ಥಾನಗಳ ಉತ್ಸವ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಬಾಳೆ ಎಲೆಗಳ ಆವಶ್ಯಕತೆ ಇರುತ್ತದೆ. ಕೇರಳದಲ್ಲಿ ಸಾಂಪ್ರದಾಯಿಕ ಶೈಲಿಯ ಊಟಕ್ಕೆ ಪ್ರಾಧಾನ್ಯತೆ ನೀಡಲಾಗುವ ಕಾರಣ ವ್ಯಾಪಾರಿಗಳು ದ.ಕ. ಹಾಗೂ ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಬಾಳೆ ಎಲೆಗಳನ್ನು ಖರೀದಿಸುತ್ತಿದ್ದಾರೆ. ಅಲ್ಲಿ ಅಡಿಕೆ ಹಾಳೆಯ ತಟ್ಟೆ ಬಳಕೆ ತೀರಾ ವಿರಳವಾಗಿದೆ. ಕರಾವಳಿಯ ಹವಾಮಾನ ಮತ್ತು ಮಣ್ಣು ಬಾಳೆ ಗಿಡಗಳಿಗೆ ಅನುಕೂಲಕರವಾಗಿದ್ದು, ಇಲ್ಲಿ ದೊರೆಯುವ ಎಲೆಗಳು ಇತರೆಡೆಯ ಎಲೆಗಳಿಗಿಂತ ಸ್ವಲ್ಪ ಗಟ್ಟಿಯಾಗಿರುತ್ತವೆ. ಅಗಲ ಮತ್ತು ಉದ್ದದಲ್ಲಿ ಊಟಕ್ಕೆ ಬಳಕೆಗೆ ಸಮರ್ಪಕವಾಗಿವೆ.
ಕೆಲವು ದಿನ ಇರಿಸಿದರೂ ಹಾಳಾಗುವುದಿಲ್ಲ. ಈ ಕಾರಣಗಳಿಂದ ಕರಾವಳಿಯ ಎಲೆಗಳಿಗೆ ಹೆಚ್ಚಿನ ಬೇಡಿಕೆ ಒದಗಿ ಬಂದಿದೆ. ಸ್ಥಳೀಯ ರೈತರು ಹೇಳುವಂತೆ ಹಬ್ಬದ ಕಾಲದಲ್ಲಿ ಎಲೆಗಳ ಬೆಲೆ ಏರಿಕೆಯಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಕಡಿಮೆ ದರ ಸಿಗುತ್ತಿದ್ದರೂ ಕೇರಳದಿಂದ ದೊಡ್ಡ ಆರ್ಡರ್‌ ಬಂದಾಗ ಲಾಭದಾಯಕವಾಗುತ್ತದೆ. ಈ ಮೂಲಕ ಕರಾವಳಿಯ ಬಾಳೆ ಎಲೆಗಳು ಕೇರಳದ ಸಾಂಪ್ರದಾಯಿಕ ಊಟ ಪದ್ಧತಿಗೆ ಅವಿಭಾಜ್ಯವಾಗಿದ್ದು, ಎರಡೂ ರಾಜ್ಯಗಳ ನಡುವೆ ಕೃಷಿ ಆಧಾರಿತ ವ್ಯಾಪಾರ ಬಾಂಧವ್ಯವನ್ನು ಬಲಪಡಿಸಿವೆ. ಸಾಮಾನ್ಯವಾಗಿ ಕೇರಳದಲ್ಲಿ ನೇಂದ್ರ ಬಾಳೆಯನ್ನು ಅಧಿಕ ಸಂಖ್ಯೆಯಲ್ಲಿ ಬೆಳೆಯಲಾಗುತ್ತಿದೆ. ಆದರೆ ಈ ಬಾಳೆಗಿಡಗಳ ಎಲೆಗಳು ಒರಟಾಗಿರುವ ಕಾರಣ ಒಡೆದುಹೋಗುವ ಸಾಧ್ಯತೆಗಳು ಹೆಚ್ಚು. ಕರಾವಳಿ ಭಾಗದಲ್ಲಿ ಬೆಳೆಯುವಂತಹ ಪುಟ್ಬಾಳೆ (ಏಲಕ್ಕಿ) ಬಾಳೆಗೆ ವೈಜ್ಞಾನಿಕ ಮಹತ್ವವೂ ಇರುವ ಕಾರಣ ಪ್ರಸ್ತುತ ಇದನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top