ಜೇಸಿಐ ಸುಳ್ಯ ಪಯಸ್ವಿನಿಗೆ ವಲಯ ಉಪಾಧ್ಯಕ್ಷರ ಅಧೀಕೃತ ಭೇಟಿ

ಜೇಸಿಐ ಭಾರತದ ಸಂವಿಧಾನ ಬದಲಾವಣೆಯಂತೆ ವಲಯ ಉಪಾಧ್ಯಕ್ಷರು ನಿಯೋಜಿತ ಘಟಕಕ್ಕೆ ಅಧೀಕೃತ ಭೇಟಿ ನೀಡಿ ಆಡಳಿತ ತರಬೇತಿ ಕಾರ್ಯಗಾರವನ್ನು ನಡೆಸಿಕೊಡಬೇಕಾಗಿರುವುದರಿಂದ, ಜೆಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ವಲಯ ಉಪಾಧ್ಯಕ್ಷ ರಾದ ಜೇಸಿ. ಸೆನೆಟರ್ ಜಿತೇಶ್ ಪಿರೇರಾ ತಮ್ಮ ಅಧೀಕೃತ ಭೇಟಿಯನ್ನು ಫೆಬ್ರವರಿ 22ರಂದು ಮಾಡಿದರು.
ವಲಯ ಉಪಾಧ್ಯಕ್ಷರ ಅಧೀಕೃತ ಬೇಟಿ ಕಾರ್ಯಕ್ರಮವನ್ನು ಸುಳ್ಯದ
ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಿದ್ದು,
ಈ ಸಂದರ್ಭದಲ್ಲಿ ಘಟಕದ
ಸಾಮಾನ್ಯ ಸಭೆಯನ್ನು ಜೆಸಿ ಲತಾಶ್ರೀ ಸುಪ್ರೀತ್ ಮೊಂಟಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ವೇದಿಕೆಯಲ್ಲಿ ನಿಕಟಪೂರ್ವಾಧ್ಯಕ್ಷರಾದ ಜೆ.ಎಫ್. ಎಮ್ ಸುರೇಶ್ ಕಾಮತ್, ವಲಯ ಉಪಾಧ್ಯಕ್ಷರಾದ ಜೆಸಿಐ ಸೆನೆಟರ್ ಜಿತೇಶ್ ಪಿರೇರಾ, ಮುಖ್ಯ ಅತಿಥಿಗಳಾಗಿ ಪಯಸ್ವಿನಿ ಸೀನಿಯರ್ ಛೆಂಬರ್ ಇಂಟರ್ ನ್ಯಾಶನಲ್ ಇದರ ಅಧ್ಯಕ್ಷರಾದ ಜೇಸಿ. ಹೆಚ್.ಜಿ.ಎಫ್. ಜಯಪ್ರಕಾಶ್ ಕೆ. , ಕಾರ್ಯದರ್ಶಿ ಜೇಸಿ. ತಾರ ಮಾಧವ ಚೂoತಾರು ಉಪಸ್ಥಿತರಿದ್ದರು.
ಸಾಮಾನ್ಯ ಸಭೆಯಲ್ಲಿ ಘಟಕದಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ಘಟಕದ ಕಾರ್ಯಚಟುವಟಿಕೆಗಳನ್ನು ಕಾರ್ಯದರ್ಶಿ ಯವರು ಸಭೆಗೆ ಮಂಡಿಸಿದರು.
ನಂತರ ಜೇಸಿ ಸೆನೇಟರ್ ಜಿತೇಶ್ ಪಿರೇರಾ ಅವರು ತರಬೇತಿ ಕಾರ್ಯಗಾರವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪೂರ್ವ ವಲಯಾಧ್ಯಕ್ಷರಾದ ಪಿಪಿಪಿ ಅಶೋಕ್ ಚೂoತಾರ್ , ಜೆಸಿ ದೇವರಾಜ್ ಕುದ್ಪಾಜೆ, ಜೆಸಿ ಹೆಚ್.ಜಿ.ಎಪ್ ನವೀನಕುಮಾರ್, ಜೇಸಿ. ರವಿಕುಮಾರ್, ಸುಪ್ರೀತ್ ಮೋoಟಡ್ಕ, ಶಂಕರ್ ಪೆರಾಜೆ, ಶ್ರೀಮತಿ. ಜಯಲಕ್ಷ್ಮಿ, ಶ್ರೀಮತಿ. ಲೀಲಾವತಿ, ರಂಜಿತ್ ಪೂಜಾರಿ, ಕೇಶವ, ಮಹೇಶ್ ಬೆಳ್ಳಾರ್ಕರ್, ಮಂಜುನಾಥ್, ಅಶೋಕ್ ಅಡ್ಕಾರ್, ಮೊದಲದವರು ಉಪಸ್ಥಿತರಿದ್ದರು.
ಜೇಸಿ ಶೋಭಾ ಅಶೋಕ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಜೇಸಿ.ಸುನಿತಾ ರವಿಕುಮಾರ್ ಜೇಸಿವಾಣಿ ವಾಚಿಸಿದರು. ಜೇಸಿ. ವಿನೋದ್ ಮೂಡಗದ್ದೆ ವಲಯ ಉಪಾಧ್ಯಕ್ಷನ್ನು ಸಭೆಗೆ ಪರಿಚಯಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top