ಜಾತಿ ಭೇದ ಭಾವ ಬಿಟ್ಟು ಹಿಂದುಗಳಾದ ನಾವು ಒಗ್ಗಟ್ಟಿನಿಂದ ಶ್ರದ್ಧಾ ಕೇಂದ್ರದಲ್ಲಿ ದುಡಿಯಬೇಕು : ಮಾಣಿಲಶ್ರೀ

ಜಾತಿ ಭೇದ ಭಾವ ಬಿಟ್ಟು ಹಿಂದುಗಳಾದ ನಾವು ಒಗ್ಗಟ್ಟಿನಿಂದ ಶ್ರದ್ಧಾ ಕೇಂದ್ರದಲ್ಲಿ ದುಡಿಯಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಸೋಣಂಗೇರಿ ಶ್ರೀ ಕೃಷ್ಣ ಭಜನಾ ಜೀರ್ಣೊದ್ದಾರಗೊಳ್ಳುತ್ತಿದ್ದು ಇದರ ವೀಕ್ಷಣೆಗೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾ.9 ರಂದು ಭೇಟಿ ನೀಡಿ ಆಶೀರ್ವಾಚನ ನೀಡಿದರು.
ಜಾತಿ ಭೇದ ಭಾವ ಮೇಲು ಕೀಳು ಎಂಬುದು ಹಿಂದು ಧರ್ಮಕ್ಕೆ ಇರುವ ಹಿನ್ನಡೆ.ಹಾಗೆಯೇ ಜಾತಿ ಬೇದ ಭಾವ, ಮೇಳು-ಕೀಳು, ಮದ-ಮತ್ಸರವನ್ನು ಬಿಟ್ಟು ಇನ್ನೊಬ್ಬರ ಏಳಿಗೆ ಮತ್ತು ಸಂತೋಷದಲ್ಲಿ ನಾವು ಖುಷಿ ಪಡೆದಾಗ ಅದು ನಮಗೆ ಒಳಿತಾಗುತ್ತದೆ.ಗ್ರಾಮ ದೇವಸ್ಥಾನವಾದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನಕ್ಕೆ ಪ್ರತಿ ಸೋಮವಾರ ಗ್ರಾಮದ ಪ್ರತಿ ಮನೆಯವರು ಭೇಟಿ ನೀಡಿ ದೇವಾಲಯದಲ್ಲಿ ಸೇವೆ ಮಾಡಿಸಿ ದೇವರ ದೀಪಕ್ಕೆ ಶುದ್ದ ಎಳ್ಯಣ್ಣೆ ನೀಡಬೇಕು. ಇದರೊಂದಿಗೆ ಭಜನಾ ಮಂದಿರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು‌. ಇಲ್ಲಿಯ ಭಜನಾ ಮಂದಿರ ಜೀರ್ಣೋದ್ಧಾರ ಕೆಲಸಕ್ಕೆ ರೂ.25,000 ದೇಣಿಗೆ ನೀಡುತ್ತೇನೆ ಎಂದು ಘೋಷಿಸಿದರು.ಅಡ್ಡಂತಡ್ಕ ದೇರಣ್ಣ ಗೌಡ ರೂ.11,000 ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದರು.ಇತರರು ತಮ್ಮ ಸಾಮರ್ಥ್ಯ ಅನುಗುಣವಾಗಿ ದೇಣಿಗೆ ನೀಡುವುದಾಗಿ ತಿಳಿಸಿದರು.
ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ, ಪ್ರಮುಖರಾದ ಸುಪ್ರೀತ್ ಮೋಂಟಡ್ಕ, ಲೀಲಾವತಿ ಕರುಣಾಕರ ನಡುಮನೆ, ರುಕ್ಷ್ಮಯ್ಯ ಗೌಡ ನಡುಮನೆ, ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸ್ಥಳೀಯರು ಉಪಸ್ಥಿತರಿದ್ದರು

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top