ಕೆಪಿಸಿಸಿ ಸದಸ್ಯ, ಉದ್ಯಮಿ ಹೆಚ್ ಎಂ ನಂದಕುಮಾರ್ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ

ಕೆಪಿಸಿಸಿ ಸದಸ್ಯ, ಉದ್ಯಮಿ ಹೆಚ್ ಎಂ ನಂದಕುಮಾರ್ ಇಂದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅಡ್ಯಡ್ಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಬೇಡಿಕೆ ಅಹವಾಲುಗಳ ಬಗ್ಗೆ ಚರ್ಚಿಸಿ ಮಾತನಾಡಿ ಸುಳ್ಯದ ಜನತೆ ಪ್ರೀತಿ ನೀಡಿದ್ದಾರೆ. ತಮ್ಮ ಅಭಿಮಾನ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ತಮ್ಮ ಸಮಸ್ಯೆ ಅಹವಾಲುಗಳಿಗೆ ಬ್ಲಾಕ್ ಅಧ್ಯಕ್ಷರು ಮತ್ತು ಪಕ್ಷದ ನಾಯಕರೊಂದಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ರವರು, ತಮಿಳು ಕಾರ್ಮಿಕರ ಮತ್ತು ಕಾರ್ಯಕರ್ತರ ಯಾವುದೇ ಸಮಸ್ಯೆಗೆ ನಾವು ಸದಾ ಸ್ಪಂದಿಸುತ್ತೇವೆ. ಕಳೆದ 2 ವರ್ಷಗಳಿಂದಲೂ ನಿರಂತರವಾಗಿ ಕಾರ್ಯಕರ್ತರ ಅಹವಾಲುಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಕಾರ್ಯ ನಿರ್ವಹಿಸುತ್ತಾ ಬಂದಿದ್ದೇವೆ. ಇನ್ನು ಮುಂದೆಯೂ ನಮ್ಮಿಂದ ಸಾಧ್ಯವಾಗುವ ಎಲ್ಲಾ ರೀತಿಯಲ್ಲಿ ಪ್ರಯತ್ನ ಪಡಲು ನಾವು ಸದಾ ಸಿದ್ದರಾಗಿದ್ದೇವೆ. ಪಕ್ಷ ಸಂಘಟನೆ ಮತ್ತು ಅಭಿವೃದ್ಧಿಗೆ ತಾವೆಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಂಗಳೂರು ನಗರ ಜಿಲ್ಲಾ ಇಂಟಕ್ ಅಧ್ಯಕ್ಷ ಮುರುಘನ್ ಕಾರ್ಯಕರ್ತರನ್ನು ಉದ್ದೇಶಿಸಿ. ಮಾತನಾಡಿದರು. ಕಾಂಗ್ರೆಸ್ ಮುಖಂಡ ಅಣ್ಣಾದೊರೈ ಸ್ವಾಗತಿಸಿ ವಂದಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅಡ್ಯಡ್ಕದ ಕಾಂಗ್ರೆಸ್ ಮುಖಂಡ ಅಣ್ಣದೊರೈಯವರ ಮುತುವರ್ಜಿ ಮತ್ತು ಬೇಡಿಕೆಯಂತೆ ಅಡ್ಯಡ್ಕ ಸಮೀಪದ ಕೋಣಗುಂಡಿಯ ನಿವಾಸಿ ಬಡ ಕುಟುಂಬದ ದಂಪತಿಗಳಾದ ಶ್ರೀಮತಿ ಸವಿತಾ ಮತ್ತು ದಾಮೋದರರವರ ಮನೆಗೆ ಭೇಟಿ ನೀಡಿ ನಿರ್ಮಾಣ ಹಂತದಲ್ಲಿರುವ ಮನೆಯ ಕೆಲಸ ಪೂರೈಸಲು ಆರ್ಥಿಕ ನೆರವು ನೀಡಿದರು.

ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಕಾರ್ಯದರ್ಶಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್, ತೊಡಿಕಾನ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ತಿಮ್ಮಯ್ಯ ತೋಡಿಕಾನ, ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ ತೋಡಿಕಾನ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ದೊಡ್ಡಡ್ಕ, ಮುಖಂಡರಾದ ಶುಭಕರ ನಾಯಕ್ ಉಬರಡ್ಕ, ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರೇಮ ಹರೀಶ್ವರನ್ ಗಾಂಧಿ, ಯಶವಂತ ಅಡ್ಯಡ್ಕ, ಭರತ್ ಅಡ್ಯಡ್ಕ, ಸುರೇಂದ್ರ ಅಡ್ಯಡ್ಕ, ಪುನೀತ್ ಅಡ್ಯಡ್ಕ, ಮಂಜುನಾಥ್ ಮಡ್ತಿಲ, ಮಣಿಕಂಠಣ್ ಮೊದಲಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top