ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ದ.ಕ. ಇದರ ವಾರ್ಷಿಕ ವಿಶೇಷ ಶಿಬಿರ ಕಲರವ 2026 ರಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಸುಳ್ಯದ ಕನ್ನಡ ಭವನದಲ್ಲಿ ನಡೆದ ಎರಡು ದಿನಗಳ ಸಾಧನೆ ಸಂಕಲ್ಪ ಯುವ ಸ್ಪೂರ್ತಿ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜೇಸಿಐ ಸುಳ್ಯ ಪಯಸ್ವಿನಿ ಇದರ ಪೂರ್ವಾಧ್ಯಕ್ಷರು, ರಾಷ್ಟ್ರೀಯ ತರಬೇತುದಾರರಾದ ಜೇಸಿ. ಹೆಚ್.ಜಿ.ಎಫ್ ಸೀತಾರಾಮ ಕೇವಳ ಇವರು ಪರಿಣಾಮಕಾರಿ ಸಂವಹನ ಎಂಬ ವಿಷಯದ ಬಗ್ಗೆ, ಜೇಸಿಐ ವಲಯ 24 ಇದರ ವಲಯ ತರಬೇತುದಾರರಾಗಿದ್ದು ಪ್ರಸ್ತುತ ಜೇಸಿಐ ಸುಳ್ಯ ಪಯಸ್ವಿನಿಯ ಜೊತೆ ಕಾರ್ಯದರ್ಶಿ, ಮಡಿಕೇರಿ ಆಕಾಶವಾಣಿಯ ಉದ್ಘೋಷಕರಾದ ಜೇಸಿ. ವಿನೋದ್ ಮೂಡಗದ್ದೆ ಇವರು ಯುವಜನತೆ ಮತ್ತು ಸಮೂಹ ಮಾಧ್ಯಮ ಎಂಬ ವಿಷಯದ ಬಗ್ಗೆ, ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ. ಶಶಿಧರ ಎಂ.ಜೆ. ಇವರು ಪರಿಣಾಮಕಾರಿ ಶಿಕ್ಷಣದ ಬಗ್ಗೆ, ಜೇಸಿಐ ಭಾರತದ ವಲಯ 15ರ ವಲಯ ತರಬೇತುದಾರರಾದ ಜೇಸಿ. ದೀಪಾ ರಾವ್ ಸುರತ್ಕಲ್, ಮಂಗಳೂರು ಇವರು ಯುವಜನತೆ ಮತ್ತು ಸಬಲೀಕರಣ ಹಾಗೂ , ಜೇಸಿಐ ಭಾರತದ ವಲಯ 15ರ ವಲಯ ತರಬೇತುದಾರರು ಹಾಗೂ ಪೂರ್ವ ವಲಯ ಅಧಿಕಾರಿಯಾದ
ಜೇಸಿ. ವರುಣ್ ಪ್ರಭು ಮಂಗಳೂರು ಇವರು ತಂಡ ನಿರ್ವಹಣೆ ಎಂಬ ವಿಷಯಗಳ ಬಗ್ಗೆ ಅತ್ಯುತ್ತಮ ರೀತಿಯಲ್ಲಿ ತರಬೇತಿ ಕಾರ್ಯಾಗಾರವನ್ನು ನಡೆಸಿ ಕೊಟ್ಟಿರುತ್ತಾರೆ.
ಕಾರ್ಯಕ್ರಮಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ. ಪಿ. ಬಿ. ಸುಧಾಕರ ರೈ, ಉಪ ಪ್ರಾಂಶುಪಾಲರಾದ ಶ್ರೀ. ಪ್ರಕಾಶ್ ಮೂಡಿತ್ತಾಯ, ಶ್ರೀಮತಿ. ಲತಾ ಮಹೇಶ್ ಶೆಣೈ, ಶ್ರೀಮತಿ. ಮಮತಾ ಮೂಡಿತ್ತಾಯ, ಶ್ರೀಮತಿ. ಚಂದ್ರಾವತಿ, ಶ್ರೀ. ಪ್ರಜ್ವಲ್, ಶ್ರೀಮತಿ. ಹೇಮಾವತಿ ಹಾಗೂ ಕಾಲೇಜಿನ ಇತರ ಶಿಕ್ಷಕಿಯರು ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷರಾದ ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ, ನಿಕಟ ಪೂರ್ವ ಅಧ್ಯಕ್ಷರಾದ ಜೆ.ಎಫ್. ಎಂ ಸುರೇಶ್ ಕಾಮತ್, ಕಾರ್ಯದರ್ಶಿ ಜೇಸಿ. ತಾರಾ ಮಾದವ ಚೂಂತಾರ್, ಪೂರ್ವಾಧ್ಯಕ್ಷರಾದ ಜೇಸಿ. ಹೆಚ್.ಜಿ.ಎಫ್. ಗುರುಪ್ರಸಾದ್ ನಾಯಕ್, ಸದಸ್ಯರಾದ ಜೇಸಿ. ರವಿಕುಮಾರ್ ಅಕ್ಕೋಜಿಪಾಲ್, ಜೇಸಿ. ಪ್ರಶಾಂತ್ ಅಂಬೆಕಲ್ಲು, ಹಾಗೂ ಜೇಸಿ. ವಿನೋದ್ ಮೂಡಗದ್ದೆಯವರು ಮೊದಲಾದವರು ಉಪಸ್ಥಿತರಿದ್ದರು.



































