ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿ. ವಿಟ್ಲ, 3 ಎಫ್ ಆಯಿಲ್ ಪಾಮ್ (ಪ್ರೈ.) ಲಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಹರಿಹರ ಇವರುಗಳ ಸಹಯೋಗದಲ್ಲಿ ರೈತರಿಗೆ ಏಣಿ ವಿತರಣಾ ಕಾರ್ಯಕ್ರಮ ಹರಿಹರ ಪಲ್ಲತಡ್ಕ ಕೊಲ್ಲಮೊಗ್ರ ಸೊಸೈಟಿ ಮುಂಭಾಗದಲ್ಲಿ ನಡೆಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷರಾದ ಸೋಮಶೇಖರ ಕಟ್ಟೆಮನೆ ವಹಿಸಿದ್ದರು. ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಸಂಪಾಜೆ ಇವರು ರೇಷ್ಮೆ ಕೃಷಿ, ಮಲ್ಲಿಗೆ ಕೃಷಿ, ಗೇರು ಬೆಳೆಗಳ ಮೌಲ್ಯವರ್ಧನೆ, ಪ್ರಯೋಜನಗಳು ಹಾಗೂ ರೈತರಿಗೆ ಕೃಷಿ ಅಭಿವೃದ್ಧಿ ಸಂಸ್ಥೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು. ರವಿಶಂಕರ್ ಕ್ಲಸ್ಟರ್ ಸೂಪರ್ವೈಸರ್ ಸುಳ್ಯ ತಾಳೆ ಕೃಷಿ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷರು ಗಣೇಶ್ ಇಡ್ಯಡ್ಕ, ಸೊಸೈಟಿ ಕಾರ್ಯನಿರ್ವಹಣಾ ಅಧಿಕಾರಿ ಬೆಳ್ಯಪ್ಪಗೌಡ,ಸುಧೀರ್ ಕಟ್ಟೆಮನೆ, ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರಿಹರೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಜಗದೀಶ್ ಪಡ್ಪು, ರಾಜೇಶ್ ಬಟ್ಟಕಜೆ ಎಲಿಮಲೆ, ಸೊಸೈಟಿ ನಿರ್ದೇಶಕರು ರೇಗನ್ ಶೆಟ್ಯಡ್ಕ,ಹಿಮತ್ ಕೆ. ಸಿ, ಗೋಪಾಲ ಕೊಲ್ಲಮೊಗ್ರ ಮಾಜಿ ನಿರ್ದೇಶಕರು, ಗ್ರಾಮದ ಕೃಷಿಕರು, ಸಂಜೀವಿನಿ ಒಕ್ಕೂಟದ ವೇದಾವತಿ, ದಿವ್ಯಾ, ಸವಿತಾ ಭಾಗವಹಿಸಿದ್ದರು. ಸೋಮಶೇಖರ ಕಟ್ಟೆಮನೆ ಸ್ವಾಗತಿಸಿ, ಗಣೇಶ್ ಇಡ್ಯಡ್ಕ ವಂದಿಸಿದರು. ಸೊಸೈಟಿ ವತಿಯಿಂದ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು ಪ್ರಥಮ ಹಂತದಲ್ಲಿ ಅರ್ಜಿ ಸಲ್ಲಿಸಿದ 112 ಫಲಾನುಭವಿಗಳಿಗೆ ಏಣಿಯನ್ನು ವಿತರಿಸಲಾಯಿತು
ಹರಿಹರ ಪಲ್ಲತ್ತಡ್ಕದಲ್ಲಿ ಕೃಷಿಕರಿಗೆ ಏಣಿಗಳ ವಿತರಣೆ ಹಾಗೂ ಮಾಹಿತಿ ಕಾರ್ಯಕ್ರಮ














































