ಮಡಿಕೇರಿ ತಾಲೂಕು ಚೆಂಬು ಗ್ರಾಮದಲ್ಲಿ ಹೊಳೆಗೆ ಮೀನು ಹಿಡಿಯಲು ತೆರಳಿದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾದ ಘಟನೆ ಮಾ.23ರಂದು ವರದಿಯಾಗಿದೆ.
ಚೆಂಬು ಗ್ರಾಮದ ಪರ್ದಾಯ ಗದ್ದೆ ಭಾಸ್ಕರ ಬೆಳ್ಚಪಾಡ ಎಂಬವರು ಮೀನು ಹಿಡಿಯಲು ಹೊಳೆಗೆ ಹೋದವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಹೊಳೆಗೆ ಹೋದವರು ಬಾರದೆ ಇದ್ದಾಗ ಅವರನ್ನು ಹುಡುಕಿಕೊಂಡು ಮನೆಯವರು ಹೋಗಿದ್ದು, ಹೊಳೆ ಬದಿಯಲ್ಲಿ ಮೃತಪಟ್ಟು ಬಿದ್ದಿದ್ದರು.ಮಡಿಕೇರಿ ಗ್ರಾಮಾಂತರ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಶವವನ್ನು ಮುಂದಿನ ಕಾನೂನು ಕ್ರಮಕ್ಕೆ ಮಡಿಕೇರಿಯ ಶವಗಾರಕ್ಕೆ ಕೊಂಡೊಯ್ದಿದ್ದಾರೆ.
ಮೀನು ಹಿಡಿಯಲು ಹೊಳೆಗೆ ತೆರಳಿದ ವ್ಯಕ್ತಿ ಶವವಾಗಿ ಪತ್ತೆ














































