ಅಜ್ಜಾವರ : ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಗ್ರಾಮ ಪಂಚಾಯತ್ ಅಜ್ಜಾವರ ಹಾಗೂ ಶ್ರೀ ರಕ್ಷಾ ಸಂಜೀವಿನಿ ಒಕ್ಕೂಟ (ರಿ.)ಅಜ್ಜಾವರ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಾ.24ರಂದು ಅಜ್ಜಾವರದಲ್ಲಿ “ಮಹಿಳಾ ಜಾಗೃತಿ ಮತ್ತು ಸಾಬೂನು ತಯಾರಿಕಾ ಕಾರ್ಯಗಾರ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು NRLM ತಾಲೂಕು ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾ ಅವರು ನೆರವೇರಿಸಿದರು ,ಹಾಗೆಯೇ ಮಹಿಳಾ ಹಕ್ಕುಗಳ ಕುರಿತು ಮಾಹಿತಿಯನ್ನು ನೀಡಿದರು.
ಸಭಾಧ್ಯಕ್ಷತೆಯನ್ನು ಶ್ರೀರಕ್ಷಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವಿಶಾಲ ಎಂ ವಹಿಸಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶ್ರೀಮತಿ ಪ್ರಮೀಳಾ ಟಿ ಗರ್ಭಕೋಶದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಟ್ಟರು , ತದನಂತರ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಶ್ರೀಮತಿ ಶೋಭಾ ಎ ಅವರು ಸಾಬೂನು ತಯಾರಿಕಾ ಕಾರ್ಯಗಾರ ನಡೆಯಿತು.
ಸುಮಾರು 30 ಜನ ಮಹಿಳೆಯರು ಇದರ ಸದುಪಯೋಗ
ಪಡೆದುಕೊಂಡರು ,ವೇದಿಕೆಯಲ್ಲಿ ಚೈತ್ರ ಯುವತಿ ಮಂಡಲದ ಅಧ್ಯಕ್ಷರಾದ ಶಶ್ಮಿ ಭಟ್ ಅಜ್ಜಾವರ, ಕೌಶಲ್ಯ ವಲಯ ಮೇಲ್ವಿಚಾರಕರಾದ ಶ್ರೀಮತಿ ರೂಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಿಳೆಯರಿಗೆ ಸ್ಪರ್ಧೆಯನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಪ್ರಾರ್ಥನೆಯನ್ನು ಶ್ರೀಮತಿ ಪದ್ಮಿನಿ ನೆರವೇರಿಸಿದರು , ಸ್ನಾತಕೋತ್ತರ ಸಮಾಜ ಕಾರ್ಯಕ್ರಮದ ವಿದ್ಯಾರ್ಥಿನಿ ಡಿಂಪಲ್ ಎನ್ ಡಿ ಸ್ವಾಗತಿಸಿದರು.
ಎಂ.ಬಿ.ಕೆ ಯಾದ ಶ್ರೀಮತಿ ಜಯಶ್ರೀ ನಾಗೇಶ್ ಬೇಲ್ಯ ರವರು ವಂದಿಸಿದರು.
ಸ್ನಾತಕೋತ್ತರ ಸಮಾಜ ಕಾರ್ಯದ ವಿದ್ಯಾರ್ಥಿನಿ ಜ್ಯೋತಿ ಬಿ ಎಚ್ ಕಾರ್ಯಕ್ರಮವನ್ನು ನಿರೂಪಿಸಿದರು.
ಲಘು ಫಲಹಾರದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ರಕ್ಷಾ ಸಂಜೀವಿನಿಯ ಪದಾಧಿಕಾರಿಗಳು , ಸದಸ್ಯರು ,ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು .
ಅಜ್ಜಾವರ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜಾಗೃತಿ ಮತ್ತು ಸಾಬೂನು ತಯಾರಿಕಾ ಕಾರ್ಯಗಾರ














































