ಕಲ್ಲುಗುಂಡಿ : ಶ್ರದ್ಧಾ ಭಕ್ತಿಯಿಂದ ನಡೆದ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ

ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲ ಹಾಗೂ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳಿಗೆ ಸಮ್ಮಾನ ಕಾರ್ಯಕ್ರಮವು ಮಾರ್ಚ್ 28,29,ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.
ಮಾ 21 ರಂದು ಮಹೂರ್ತದ ಗೊನೆ ಕಡಿಯಲಾಯಿತು‌‌
27 ರಂದು ಬೆಳಿಗ್ಗೆ 5:30 ಕ್ಕೆ ದೈವಸ್ಥಾನದಲ್ಲಿ ಗಣಹೋಮ ನಡೆಯಿತು.
ಮಾ 28 ರಂದು ರಾತ್ರಿ 7 ಗಂಟೆಗೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಿಂದ ಭಂಡಾರ ಹೊರಟಿತು.ರಾತ್ರಿ 8:30 ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.ಬಳಿಕ ರಾತ್ರಿ 12 ಕ್ಕೆ ಶ್ರೀ ದೈವದ ಕುಲ್ಬಾಟ ನಡೆಯಿತು.
ಮಾರ್ಚ್ 29 ರಂದು ಬೆಳಿಗ್ಗೆ ಮಹಾವಿಷ್ಣು ಮೂರ್ತಿ ದೈವದ ಅಗ್ನಿ ಪ್ರವೇಶ ನಡೆಯಿತು. ಬಳಿಕ ಪ್ರಸಾದ ವಿತರಣೆ, ಪೂರ್ವಾಹ್ನ 8 ಕ್ಕೆ ಮಾರಿಕಳ ಪ್ರವೇಶ ನಡೆಯಿತು.
ಬಳಿಕ ಹರಕೆಯ ಸುರಿಗೆಗಳನ್ನು ಒಪ್ಪಿಸಲಾಯಿತು.
ನಂತರ ಪ್ರಸಾದ ವಿತರಣೆ ನಡೆಯಿತು.





















































































Leave a Comment

Your email address will not be published. Required fields are marked *

error: Content is protected !!
Scroll to Top