ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ವತಿಯಿಂದ ಪೂಜ್ಯ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ದಂತೆ. ಮಾತೃಶ್ರೀ ಹೇಮಾವತಿ ಅಮ್ಮನವರ ಪ್ರೀತಿಯ ಕನಸಿನ ಕಾರ್ಯಕ್ರಮವಾದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಐರ್ವನಾಡು ವಲಯದಲ್ಲಿ ಐರ್ವನಾಡಲ್ಲಿ ಈಗಾಗಲೇ ಪ್ರತಿ ತಿಂಗಳು ಮಾಸಾಶನವನ್ನು ಪಡೆಯುತ್ತಿರುವ ವಾತ್ಸಲ್ಯ ಸದಸ್ಯರಾದ ಲಲಿತಾ ಇವರಿಗೆ ಶೌಚಾಲಯ ಮತ್ತು ಸ್ನಾನ ಗ್ರಹವನ್ನು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಎಸ್.ಎನ್ ಮನ್ಮಥ ಹಸ್ತಾಂತರ ಮಾಡಿದರು. ಬಳಿಕ ಮಾತನಾಡಿದ ಅವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವಾರು ಸಾಮಾಜ ಮುಖಿ ಕಾರ್ಯಕ್ರಮ ನಡೆಯುತ್ತಾ ಬಂದಿದೆ ಎಂದು ಹೇಳಿ ಶುಭ ಹಾರೈಸಿದರು. ಸುಳ್ಯ ತಾಲೂಕಿನ ಯೋಜನಾಧಿಕಾರಿಯವರಾದ ಮಾಧವ ಗೌಡ ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಪರ ಕಾರ್ಯಕ್ರಮಗಳ ಬಗ್ಗೆ ಕುರಿತು ಮಾಹಿತಿ ಮಾರ್ಗದರ್ಶನ ನೀಡಿ ಕಷ್ಟದಲ್ಲಿರುವವರಿಗೆ ಅವರುಗಳ ಕಷ್ಟ ಪರಿವಹಾರ ವಾಗುವ ನಿಟ್ಟಿನಲ್ಲಿ ಸಹಾಯ ಮಾಡುವುದೇ ನಿಜವಾದ ಧರ್ಮ ಇದರಿಂದ ನಾವು ಪುಣ್ಯದ ಫಲವನ್ನು ಅನುಭವಿಸುತ್ತೇವೆ ಎಂದು ಸವಿಸ್ತಾರವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ರವಿನಾಥ್ ಮಡ್ತಿಲ, ಜೆ.ಟಿ ವೆಂಕಟಪ್ಪ ಗೌಡ ಒಕ್ಕೂಟದ ಮಾಜಿ ಅಧ್ಯಕ್ಷರು ಹಾಗೂ ಜನಜಾಗೃತಿ ವೇದಿಕೆ ಸದಸ್ಯರು, ಸೀತ ಚಂದ್ರಶೇಖರ್, ನಟರಾಜ್ ಸಿಕುಪು, ಸೂರ್ಯ ಘಟಕದ ಸದಸ್ಯರಾದ ವೀರನಾಥ, ವಲಯದ ಅಧ್ಯಕ್ಷರಾದ ವೇದಾ ಶೆಟ್ಟಿ, ಸುದ್ದಿ ವರದಿಗಾರರಾದ ಗಣೇಶ್, ಒಕ್ಕೂಟದ ಸೇವಾ ಪ್ರತಿನಿಧಿ ಮೀನಾಕ್ಷಿ ಹಾಗೂ ಒಕ್ಕೂಟದ ಪದಾಧಿಕಾರಿಯವರು ಹಾಗೂ ಈ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಧಿಕಾರಿಯವ ಲಕ್ಷ್ಮಿ ಸ್ವಾಗತಿಸಿ ವಲಯದ ಮೇಲ್ವಿಚಾರಕರಾದ ರಮೇಶ್ ವಂದಿಸಿದರು.
ಐವರ್ನಾಡು : ಅಸಾಯಕ ಮಹಿಳೆಗೆ ಶೌಚಾಲಯ ಮತ್ತು ಸ್ನಾನ ಗ್ರಹ ನಿರ್ಮಾಣ ಹಸ್ತಾಂತರ ಕಾರ್ಯಕ್ರಮ














































