ಬ್ರಿಟಿಷ ವಿರುದ್ಧ ಹೋರಾಟ ಮಾಡಿದ
ಸಮರವೀರ ಕೆದಂಬಾಡಿ ರಾಮಯ್ಯ ಗೌಡರನ್ನು ನೆನಪಿಸುವ ಮೂಲಕ ಅವರ ಇತಿಹಾಸವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ನಡೆಯಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಾ. 31 ರಂದು ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಬೆಳ್ಳಾರೆಯಲ್ಲಿ ರಾಮಯ್ಯಗೌಡರ ಪತ್ಥಳಿ ಸ್ಥಾಪನೆ ಮಾಡುವುದರ ಮೂಲಕ ಬೆಳ್ಳಾರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಬೇಡಿಕೆ ಇದೆ.ಈ ನಿಟ್ಟಿನಲ್ಲಿ ಇಲ್ಲಿಗೆ ರೂ.25ಕೋಟಿ ಅನುದಾನದ ಅಗತ್ಯವಿದ್ದು ಅನುದಾನ ಬಿಡುಗಡೆ ಮಾಡಲು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ಸದಾನಂದ ಮಾವಜಿ ಸಹಕಾರ ಮಾಡಬೇಕೆಂದು ಎಂದು ಹೇಳಿದರು.
ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿಯವರ ಅಧ್ಯಕ್ಷತೆ ವಹಿಸಿ ಮಾತನಾಡಿ ಅನುದಾನ ಇಲ್ಲಿಗೆ ಬಿಡುಗಡೆ ಮಾಡಲು ತಾಂತ್ರಿಕ ತೊಂದರೆ ಇದೆ.ಬ್ರಿಟಿಷರ ಖಜಾನೆ ಇದ್ದ ಈ ಜಾಗ ಬಂಗ್ಲೆಗುಡ್ಡೆಯನ್ನು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಬಿಳಿಕ ಇಲ್ಲಿ ಉದ್ಯಾವನ ನಿರ್ಮಾಣ, ರಾಮಯ್ಯ ಗೌಡರ ಪುತ್ಥಳಿ ನಿರ್ಮಾಣ ಸೇರಿದಂತೆ ಇತರ ಕೆಲಸಗಳು ನಡೆಯಲಿದ್ದು ಸ್ಥಳೀಯರ ಅಭಿಪ್ರಾಯ ಪಡಕೊಂಡು ಮುಂದುವರಿಯಲಾಗುವುದು ಎಂದು ಹೇಳಿದರು.
ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಧ್ಯಪಕರಾದ ಪ್ರಸನ್ನ ನಿಡ್ಯಮಲೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಬ್ರಿಟಿಷರ ವಿರುದ್ದ ಹೋರಾಟ ಮಾಡಿದ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಹೆಸರು ಶಾಶ್ವತವಾಗಿ ಉಳಿಸುವ ಕೆಲಸ ಮಾಡಬೇಕು.ಬಸ್ಸು ನಿಲ್ದಾಣಕ್ಕೆ ರಸ್ತೆಗೆ ಅವರ ಹೆಸರು ಇಡುವ ಅಗತ್ಯ ಇದೆ.ಅವರ ಹೆಸರನ್ನು ಉಳಿಸಿ ಬೆಳಸುವ ಕಾರ್ಯ ನಡೆಯಬೇಕು. ಸಂಗೊಳಿ ರಾಯಣ್ಣರ ಹೋರಟ ಸಿನಿಮಾ ಆಗಿದೆ.ರಾಮಯ್ಯ ಗೌಡರ ಹೋರಟ ಸಿನಿಮಾ ಆಗಿಲ್ಲ.ಇದು ಸಿನೀಮಾ ಆಗುವ ಅಗತ್ಯ ಇದ್ದು,ರಾಮಯ್ಯ ಗೌಡರ ಹೋರಟ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು.ಅವರ ಹೆಸರನ್ನು ಉಳಿಸಿ ಬೆಳೆಸುವ ಕಾರ್ಯ ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರರು ಪಂಚಾಯತ್ ರಾಜ್ ಹಾಗೂ ಬೆಳ್ಳಾರೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಎಂ.ಎಂ. ಪಯಾಜ್ ಅಹ್ಮದ್, ಬೆಳ್ಳಾರೆ ಠಾಣೆ ಉಪನಿರೀಕ್ಷರಾದ ಈರಯ್ಯ ದೂಂತೂರು, ಅಮರ ಸುಳ್ಯ ಸಮರ ೧೮೩೭ ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷರಾದ ಚಂದ್ರಾ ಕೋಲ್ಟಾರ್, ಸುಬ್ರಹ್ಮಣ್ಯ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಧ್ಯದ ಅಧ್ಯಕ್ಷರಾದ ರಾಜೀವಿ ಆರ್ ರೈ, ಮಂಗಳೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್ ಮನ್ಮಥ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಭಟ್ ಕುರುಂಬುಡೇಲು, ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯರಾದ ಮಾಧವ ಗೌಡ ಕಾಮಧೇನು, ಬೆಳ್ಳಾರೆಯ ಕಾಮಧೇನು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪು, ಬೆಳ್ಳಾರೆ ಗ್ರಾಮಗೌಡ ಸಮಿತಿ ಅಧ್ಯಕ್ಷರಾದ ಐತ್ತಪ್ಪ ಗೌಡ, ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಗೌ.ಕ್ಯಾಪ್ಟನ್ ಜಯಕರ ಮಡ್ತಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಅರೆಭಾಷೆ ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು, ಚಂದ್ರಾವತಿ ಬಡ್ಡಡ್ಕ, ಲತಾ ಕುದ್ಪಾಜೆ, ಪಿ.ಎಸ್.ಕಾರ್ಯಪ್ಪ ಉಪಸ್ಥಿತರಿದ್ದರು.
ಸವಿತಾ ಸಂದೇಶ್ ಆಶಯ ಗೀತೆ ಹಾಡಿದರು. ಬೆಳ್ಳಾರೆ ಕೆಪಿಎಸ್ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.
ಕಾರ್ಯಕ್ರಮ ಸದಸ್ಯ ಸಂಚಾಲಕರಾದ ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿದರು.
ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.
ಬಂಗ್ಲೆಗುಡ್ಡೆ ತನಕ ಮೆರವಣಿಗೆ ಸಾಗಿ, ಕೆದಂಬಾಡಿ ರಾಮಯ್ಯ ಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಭಾ ಕಾರ್ಯಕ್ರಮ ನಡೆಯಿತು.
ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಇತಿಹಾಸವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ನಡೆಯಬೇಕು : ಶಾಸಕಿ ಭಾಗೀರಥಿ ಮುರುಳ್ಯ














































