ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವ ಏ.13ರಿಂದ ಏ.20ರ ತನಕ ವೈಭವದಿಂದ ನಡೆಯಲಿದ್ದು ಏ.1ರಂದು ಜಾತ್ರೋತ್ಸವ ವಿವಿಧ ಸಮಿತಿಗಳ ತುರ್ತು ಸಭೆದೇವಳದ ಅಕ್ಷಯ ಮಂದಿರದಲ್ಲಿ ನಡೆಯಿತು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ ಅಧ್ಯಕ್ಷತೆ ವಹಿಸಿದ್ದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆಯವರು ಈ ಸಂದರ್ಭದಲ್ಲಿ ಮಾತನಾಡಿ ಏ.5ರಂದು ದೇವಳದಲ್ಲಿ ಸುಳ್ಯ ಸೀಮೆಯ 18 ಗ್ರಾಮಗಳ ಭಕ್ತರಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳು ಕರಸೇವೆಗೆ ಆಗಮಿಸಲಿದ್ದು ಈ ಸಂದರ್ಭದಲ್ಲಿ ಊರಿನವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕರಸೇವಕರಿಗೆ ಸಹಕಾರ ನೀಡಬೇಕೆಂದು ಹೇಳಿದರು.
ಜಾತ್ರಾ ಸಮಯದ ಅನ್ನಸಂತರ್ಪನೆ,ಬೆಳಕು,ಪಾರ್ಕಿಂಗ್ ,ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.ವಿವಿಧ ಸಮಿತಿಯವರು ತಮ್ಮ ಸಲಹೆಗಳನ್ನು ನೀಡಿದರು. ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಯು.ಎಂ
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ತೀರ್ಥರಾಮ ಪರ್ನೋಜಿ,ಕೆ.ಕೆ ಬಾಲಕೃಷ್ಣ ಕುಂಟುಕಾಡು,ವಸಂತ ಪೆಲ್ತಡ್ಕ,ತಿಮ್ಮಯ್ಯ ಮೆತ್ತಡ್ಕ,ಮಾಲತಿ ಬೋಜಪ್ಪ ಮಾಜಿ ಸದಸ್ಯರಾದ ಕೆ.ಕೆ ನಾರಾಯಣ,ಎಸ್.ಪಿ ಲೋಕನಾಥ,ಎ.ಜಿ ಉಮಾಶಂಕರ,ಹಸಿರುವಾಣಿ ಸಮಿತಿ ಸಂಚಾಲಕ ಕೇಶವ ಅಡ್ತಲೆ, ದೇವಳದ ಮ್ಯಾನೇಜರ್ ಆನಂದ ಕಲ್ಲಗದ್ದೆ, ಕಾಯರತೋಡಿ ಮಹಾವಿಷ್ಣು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಜತ್ತಪ್ಪ ರೈ,ರವೀಂದ್ರ ಪಂಜಿಕೋಡಿ,ಪ್ರಶಾಂತ್ ಕಾಫಿಲ,ಜಗದೀಶ ಎಡ್ಚಾರ್,ಕಮಲಾಕ್ಷ ಪಿದಮಜಲು,ಸುನಂದ ಅಡಿಗಾರ,ರಾಮಕ್ರಷ್ಣ ಮಯ್ಯ,ಚಿದಾನಂದ ಕಾಡುಪಂಜ,ಭಾರತಿ ಪುರುಶೋತ್ತಮ ಉಳುವಾರು,ಮಾದವ ಎಡ್ಚಾರ್,ಚಿದಾನಂದ ಬಾಳೆಕಜೆ,ಜನಾರ್ದನ ಬಾಳೆಕಜೆ,ಸುಂದರ ಬಾಜಿನಡ್ಕ,ಚಂದ್ರಶೇಖರ ಬಾಜಿನಡ್ಕ,ಗುರುವಪ್ಪ,ಬಾಬು,ಹರೀಶ ಉಳಿಯ,ಸುತನ್ ಮೆತ್ತಡ್ಕ,ದಿವಾಕರ ದೊಡ್ಡಡ್ಕ,ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸಂಪಾಜೆ ವಲಯ ಮೇಲ್ವಿಚಾರಕ ಹರೀಶ್ ಆಚಾರ್ಯ, ಪ್ರಭಾಕರ ಕಾಡುಪಂಜ ಇತರರು ಉಪಸ್ಥಿತರಿದ್ದರು.
ತೊಡಿಕಾನ : ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಹಿನ್ನಲೆ ವಿವಿಧ ಸಮಿತಿಗಳ ತುರ್ತು ಸಭೆ














































