ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ತೊಡಿಕಾನ ದೇವಳಕ್ಕೆ 2100 ಕೆ.ಜಿ.ಅಕ್ಕಿ, 200ಕೆ.ಜಿ ಬೆಲ್ಲ ಕೊಡುಗೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಜಾತ್ರೋತ್ಸವದ ಸಮಾರಾಧನೆಗೆ ಏ.8ರಂದು ಶ್ರೀ ಹಿಮಕರ ಕಲ್ಲಗದ್ದೆ ಬೆಂಗಳೂರು ಇವರ ನೇತೃತ್ವದಲ್ಲಿ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ವಿದ್ಯಾರಣ್ಯಪುರ ಬೆಂಗಳೂರು ಇಲ್ಲಿಂದ ಸುಮಾರು 2100 ಕೆ.ಜಿ.ಅಕ್ಕಿ, 200ಕೆ.ಜಿ.ಬೆಲ್ಲವನ್ನು ಸಮರ್ಪಿಸಿದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಸಂತೋಷ್ ಕುತ್ತಮೊಟ್ಟೆಯವರು ಶಾಲು ಹೊದಿಸಿ, ಶ್ರೀ ದೇವರ ಪ್ರಸಾದ ಕೊಡಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಯು.ಯಂ.ಕಿಶೋರ್ ಕುಮಾರ್, ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ನೌಕರರಾದ ಶ್ರೀ ಮಂಜು, ಶ್ರೀ ಮಧುಕುಮಾರ್, ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪಕರಾದ ಆನಂದ ಕಲ್ಲಗದ್ದೆ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.





















































































Leave a Comment

Your email address will not be published. Required fields are marked *

error: Content is protected !!
Scroll to Top