ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಏ.13ರಿಂದ ಆರಂಭಗೊಂಡಿದೆ.ಈ ದಿನ ಕೇರಳ ಚೆಂಡೆವಾದನ,ಕುಣಿತ ಭಜನೆ,ಯಕ್ಷಗಾನ ವೇಷಗಳೊಂದಿಗೆ ಅದ್ದೂರಿ ಹಸಿರು ವಾಣಿ ಮೆರವಣಿಗೆ ನಡೆಯಿತು.
ಅರಂತೋಡು ತೋಟಂಪ್ಪಾಡಿ ಉಳ್ಳಾಕುಲು ಉಳ್ಳಾಕ್ಲು ದೈವದ ಭಂಡಾರ ಆಗಮಿಸಿದ ಬಳಿಕ ದೇವರ ಜಳಕದ ಗುಂಡಿ ಸಮೀಪ ರಾಜರಾಮ್ ಕೀಲಾರು ಅವರು ಹಸಿರುವಾಣಿ ಮೆರವಣಿಗೆಗೆ ತೆಂಗಿನ ಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ,ಜಾತ್ರೋತ್ಸವ ಸಮಿತಿ ಅಧ್ಯಕ್ಣ ಸಂತೋಷ್ ಕುತ್ತಮೊಟ್ಟೆ,ದೇವಳದ ಇ.ಒ ಅವಿನ್ ರಂಗತ್ ಮಲೆ, ಹಸಿರುವಾಣಿ ಸಮಿತಿ ಸಂಚಾಲಕ ಕೇಶವ ಅಡ್ತಲೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯದ ಯೋಜನಾಧಿಕಾರಿ ಮಾದವ ಗೌಡ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕ್ರಷ್ಣ ಕರಿಮಜಲು,ಚಂಚಲಾಕ್ಷಿ,ತಿಮ್ಮಯ್ಯ ಮೆತ್ತಡ್ಕ,ಸತ್ಯಪ್ರಸಾದ್,ಮಾಲತಿ ಬೋಜಪ್ಪ, ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಯು.ಎಸ್ ಸದಸ್ಯರಾದ ಉಮಾಶಂಕರ ಎ.ಜಿ ,ಕೆ.ಕೆ ನಾರಾಯಣ, ಭವಾನಿಶಂಕರ ಅಡ್ತಲೆ,ಚಂದ್ರಕಲಾ ಕುತ್ತಮೊಟ್ಟೆ,ಎಸ್.ಪಿ, ಲೋಕನಾಥ,ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪಾಮೇದಪ್ಪ, ಹೇಮಂತ್ ಕುಮಾರ್ ಗೌಡರ ಮನೆ,ದೇವಳದ ಮೇನೇಜರ್ ಆನಂದ ಕಲ್ಲಗದ್ದೆ,ಪಿ.ಬಿ ಪ್ರಭಾಕರ ರೈ, ಸುಧಾಕರ ರೈ,ಗ್ರಾಮಾಭಿವ್ರದ್ದಿ ಯೋಜನೆಯ ಹರೀಶ್ ಆಚಾರ್ಯ,ಸುಂದರ ಬಾಜಿನಡ್ಕ,ರವೀಂದ್ರ ಪಂಜಿಕೋಡಿ,ಮೇದಪ್ಪ ಗೌಡ ಉಳುವಾರು,ದೀಪಕ್ ಕುತ್ತಮೊಟ್ಟೆ, ಸುಳ್ಯ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.
ತೊಡಿಕಾನ : ಜಾತ್ರೋತ್ಸವಕ್ಕೆ ಹಸಿರುವಾಣಿ ಮೆರವಣಿಗೆ














































