ಶ್ರೀ ಶಾರದಾಂಬಾ ಭಜನಾ ಮಂಡಳಿ (ರಿ. ಪಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ಪಂಜ ಮತ್ತು ನಿಂತಿಕಲ್ಲು ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಸುಳ್ಯ ತಾಲೂಕು, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪಂಜ ವಲಯ ಇದರ ಆಶ್ರಯದಲ್ಲಿ
17ನೇ ವರ್ಷದ ಭಜನಾ ತರಬೇತಿ ಪಂಜದ ಶಾರದಾಂಭಾ ವೇದಿಕೆಯಲ್ಲಿ ಏ.13ರಂದು ಉದ್ಘಾಟನೆಗೊಂಡಿದೆ.
ಭಜನಾ ತರಬೇತಿಯನ್ನು ಒಡಿಯೂರು ಶ್ರೀ ಕ್ಷೇತ್ರ ಗ್ರಾಮ ವಿಕಾಸ ಯೋಜನೆ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು
ಭಜನೆಯಿಂದ ವ್ಯಾಯಮ, ಏಕಾಗ್ರಹತೆ , ದೇವರ ಅನುಗ್ರಹ ದೊರಕುವುದು.”.ಎಂದು ಹೇಳಿದರು.
ಶ್ರೀ ಶಾರದಾಂಬ ಭಜನಾ ಮಂಡಳಿ ಪೂರ್ವಾಧ್ಯಕ್ಷ ಶಿವಪ್ಪ ಗೌಡ ಸಂಕಡ್ಕ ಸಭಾಧ್ಯಕ್ಷತೆ ವಹಿಸಿದ್ದರು.
ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ ಅತಿಥಿಯಾಗಿ ಭಾಗವಹಿಸಿ ” ಪ್ರತಿ ಗ್ರಾಮಗಳಲ್ಲೂ ಭಜನಾ ತರಬೇತಿ ನಡೆಸುವ ಉದ್ದೇಶ ನಮ್ಮದು. ಈ ಮೂಲಕ ಪ್ರತೀಯೊಬ್ಬರು ಸಂಸ್ಕಾರಯುತ ಜೀವನ ನಡೆಸಿ. ದೇಶ ಸೇವೆಯಲ್ಲಿ ಕೈಜೋಡಿಸ ಬೇಕು.” ಎಂದು ಹೇಳಿದರು. ಅತಿಥಿಗಳಾಗಿ ಶ್ರೀ ಕ್ಷೇತ್ರ ಧ. ಗ್ರಾ. ಯೋ.(ರಿ), ಬಿ.ಸಿ. ಟ್ರಸ್ಟ್ ಪಂಜ ವಲಯ ಮೇಲ್ವಿಚಾರಕಿ ಮಮತಾ, ಪಂಜ ವಲಯ ಭಜನಾ ಪರಿಷತ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಗ್ರಾಮ ಅಭಿವೃದ್ಧಿ ಯೋಜನೆ ಪಂಜ ವಲಯ ಅಧ್ಯಕ್ಷ ಧರ್ಮಪಾಲ ಕಣ್ಯಲು, ತರಬೇತದಾರರಾದ ಹರ್ಷಿತಾ ಹರಿಹರ ಪಲ್ಲತ್ತಡ್ಕ, ಭಜನಾ ಮಂಡಳಿ ಕಾರ್ಯದರ್ಶಿ ಗುರು ಪ್ರಸಾದ್ ತೋಟ, ಖಜಾಂಜಿ ನಾರಾಯಣ ಶೀರಾಜೆ ಉಪಸ್ಥಿತರಿದ್ದರು.
ಪ್ರತಿ ಗ್ರಾಮಗಳಲ್ಲೂ ಭಜನಾ ತರಬೇತಿ ನಡೆಸುವ ಗುರಿ ತಾಲೂಕು ಭಜನಾ ಪರಿಷತ್ ಗೆ ಇದೆ : ಸೋಮಶೇಖರ ಪೈಕ














































