ಶ್ರದ್ಧಾ ಭಕ್ತಿಯಿಂದ ನಡೆದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ‌ದೇವರ ದೊಡ್ಡ ದರ್ಶನ ಬಲಿ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಪ್ರಯಕ್ತ ಶ್ರೀ ದೇವರ ದೊಡ್ಡ ದರ್ಶನ ಬಲಿ ಏ.18ರಂದು ಬೆಳಿಗ್ಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆ, ಆರ್ಥಿಕ ಸಮಿತಿ ಅಧ್ಯಕ್ಷ ಕಿಶೋರ್ ಉಳುವಾರು, ಹಸಿರುವಾಣಿ ಸಂಚಾಲಕ ಕೇಶವ ಅಡ್ತಲೆ, ಅವಿನ್ ರಂಗತ್ತಮಲೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಲಕ್ರಷ್ಣ ಕೆ.ಕೆ ಕುಂಟುಕಾಡು,ವಸಂತ ಪೆಲ್ತಡ್ಕ,ತೀರ್ಥರಾಮ ಪರ್ನೋಜಿ, ಚಂಚಲಾಕ್ಷಿ ,ತಿಮ್ಮಯ್ಯ ಮೆತ್ತಡ್ಕ, ಸೊಸೈಟಿ ನಿರ್ದೇಶಕ ಪ್ರಶಾಂತ್ ಕಾಫಿಲ,ಪಂಜ ಸೀಮೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.
ಗಮನ ಸೆಳೆದ ಕೆಮ್ಮಿಜೆ ದೇವಳದ ಸುಬ್ಬ
ಈ ವರ್ಷ ದೊಡ್ಡ ದರ್ಶನ ಬಲಿಗೆ ಪುತ್ತೂರು ತಾಲೂಕಿನ ಕೆಮ್ಮಿಂಜೆ ದೇವಳದ ಬಸವ (ಸುಬ್ಬ) ವಿಶೇಷ ಆಕರ್ಷಣೆಯಾಗಿತ್ತು‌.
ಎ.೧೯ (ನಾಳೆ) ಬೆಳಿಗ್ಗೆ ಆರಾಟ ಬಾಗಿಲು ತೆರೆಯುವುದು, ಉತ್ಸವ ಬಲಿ, ಅವಕೃತ ಸ್ನಾನವಾಗಿ ಬಂದು ದರ್ಶನ ಬಲಿ, ಬಟ್ಟಲು ಕಾಣಿಕೆ, ಧ್ವಜಾವರೋಹಣ ಮತ್ತು ಎ.೨೦ ರಂದು ಸೋಮವಾರ ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯುವುದರ ಮೂಲಕ‌ ಈ ವರ್ಷದ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.





















































































Leave a Comment

Your email address will not be published. Required fields are marked *

error: Content is protected !!
Scroll to Top