ಬೆಳ್ಳಾರೆ : ಶಿಥಿಲಗೊಂಡಿದೆ ನೇಲ್ಯಮಜಲು ಪುಡ್ಕಜೆ ಮತ್ತು ಕುರುಂಬುಡೇಲು ಸಂಪರ್ಕಿಸುವ ಗೌರಿ ಹೊಳೆಯ ಕಾಲುಸಂಕ!

ಬೆಳ್ಳಾರೆ ಗ್ರಾಮದ ನೇಲ್ಯಮಜಲು ಪುಡ್ಕಜೆ ಮತ್ತು ಕುರುಂಬುಡೇಲು ಸಂಪರ್ಕಿಸುವ ಗೌರಿ ಹೊಳೆಯ ಕಾಲು ಸಂಕ ಶಿಥಿಲಗೊಂಡಿದ್ದು ಅಪಾಯಕ್ಕೆ ಅಹ್ವಾನ ನೀಡುತ್ತಿದೆ.
ಈ ಕಾಲಸಂಕದ ಕಾಂಕ್ರೀಟ್ ‌ಕುಸಿಯುತ್ತಿದೆ.ಕಬ್ಬಿಣಗಳಿಗೆ ತುಕ್ಕು ಹಿಡಿದು ಕರಗುತ್ತಿವೆ.






















































































ಬಗ್ಗೆ 2024 ರಲ್ಲಿ ಇಲ್ಲಿಯ ಆಸು ಪಾಸಿನವರು ಜಿಲ್ಲಾಧಿಕಾರಿಯವರಿಗೆ, ಈಗಿನ ಶಾಸಕರಿಗೆ, ಉಸ್ತುವಾರಿ ಸಚಿವರಿಗೆ ಮನವಿ ನೀಡಿದರು ಕೂಡ ಯಾವುದೇ ಸ್ಪಂದನೆ ಈವರೆಗೆ ನೀಡಿರುವುದಿಲ್ಲ.. ಆದರೆ 2024 ರಲ್ಲಿ ಉಸ್ತುವಾರಿ ಸಚಿವರ ಪತ್ರಕ್ಕೆ ಜಿಲ್ಲಾ ಪಂಚಾಯತ್ ಕಡೆಯಿಂದ ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್ ಇವರಿಗೆ ಪತ್ರದ ಮೂಲಕ ತಿಳಿಸಿ ಕುಲಂಕುಶವಾಗಿ ಪರಿಶೀಲಿಸಿ ಆ ಸೇತುವೆ ಬಗ್ಗೆ ವಿವರ ನೀಡಬೇಕೆಂದು ಕೇಳಿರುತ್ತಾರೆ.. ಆದರೆ ಈ ಬಗ್ಗೆ 9-4-2026 ರಂದು ನವೀನ್ ಫೆರಾವೋ ಕಾರ್ಯದರ್ಶಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸುಳ್ಯ ತಾಲೂಕು ಇವರು ಪಂಚಾಯತ್ ರಾಜ್ ಇಂಜಿನಿಯರ್ ಕಚೇರಿ ಸುಳ್ಯ ಇಲ್ಲಿ ವಿಚಾರಿಸಿದಾಗ ಆ ಪತ್ರವು ಅವರ ಕಚೇರಿ ಎಲ್ಲಿ ಇರಲಿಲ್ಲ ಎಂದು ಮಾಹಿತಿ ಲಬ್ಯವಾಗಿದೆ. ಮಂಗಳೂರಿನ ಪಂಚಾಯತ್ ರಾಜ್ ಇಲಾಖೆಯಲ್ಲಿ ಕೂಡ ಮಾಹಿತಿ ಇರಲಿಲ್ಲ. ಆಮೇಲೆ ಇನ್ನೊಂದು ಪತ್ರವನ್ನು ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆಂದು ತಿಳಿಸಿದರು.ಇದೀಗ ಈ ಕಾಲು ಸೇತುವೆ ತುಂಡಾಗಿ ಬೀಳುವ ಸ್ಥಿತಿಯಲ್ಲಿದೆ.ರಾಜಕೀಯ ಪಕ್ಷದವರು ಮತದಾನದ ಸಮಯದಲ್ಲಿ ಬಂದು ಮಾಡಿಕೊಡುತ್ತೇವೆ ಎಂದು ಆಶ್ವಾಸನೆ ಮಾತ್ರ ನೀಡುತ್ತಾ ಬಂದಿದ್ದಾರೆ.ಈ ಬಗ್ಗೆ ನೇಲ್ಯಮಜಲು ಆಸು ಪಾಸಿನವರು ಮತದಾನ ಬಹಿಷ್ಕಾರ ಮಾಡುವುದೆಂದು ಚಿಂತನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದವರು ಈ ವರ್ಷ ಮರು ನಿರ್ಮಾಣ ಕಾಮಗಾರಿ ಮಾಡದಿದ್ದಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ಮಾಡಲಾಗುವುದೆಂದು ತಿಳಿಸಿದ್ದಾರೆ.
ನೇಲ್ಯಮಜಲು ಪುಡ್ಕಾಜೆ ಮತ್ತು ಕುರುಂಬುಡೇಲು ಸಂಪರ್ಕಿಸುವ ಕಾಲು ಸೇತುವೆಯು 15 ಮನೆಗಳನ್ನು ಸಂಪರ್ಕಿಸುವ ರಸ್ತೆಯಾಗಿದೆ. ಇದರಲ್ಲಿ ಎಸ್ಸಿ ಎಸ್ಟಿ ಕಾಲೋನಿಯ 7 ಮನೆಗಳು ಸಹಿತ ಮುಸ್ಲಿಂ, ಕ್ರಿಶ್ಚಿಯನ್ ಹಿಂದೂಗಳ 8 ಮನೆಗಳಿವೆ. ಈ ಮನಗಳಿಗೆ ಬೇರೆ ಯಾವುದೇ ಸಂಪರ್ಕಿಸುವ ರಸ್ತೆ ಇರುವುದಿಲ್ಲ. ಇದೊಂದೇ ಮಾರ್ಗವಾಗಿದೆ. ಮಳೆಗಾಲದಲ್ಲಿ ನೀರು ತುಂಬಿ ಹರಿಯುತ್ತಿದ್ದು ಇದರಿಂದ ಅವರ ಮನೆಗಳಿಗೆ ಹೋಗಲು ಅಸಾಧ್ಯವಾಗಿರುತ್ತದೆ. ಬೆಳ್ಳಾರೆ ಮತ್ತು ಸುಳ್ಯಕ್ಕೆ ಹೋಗುವ ಶಾಲಾ ಮಕ್ಕಳು ಕೂಡ ಇದ್ದಾರೆ. ಮಳೆಗಾಲದಲ್ಲಿ ಕೆಲವೊಂದು ಸಲ ನೀರು ತುಂಬಿ ಹರಿಯುವುದರಿಂದ ಶಾಲೆಗೆ ಹೋಗಲು ಕೂಡ ಅಸಾಧ್ಯವಾಗಿರುತ್ತದೆ. ಈ ಕಾಲು ಸೇತುವೆಯು ಮಳೆಗಾಲದಲ್ಲಿ ಅಪಾಯಕ್ಕೆ ಕಾರಣವಾಗುತ್ತಿದ್ದು ಸೇತುವೆಯು ಬಿರುಕು ಬಿಟ್ಟಿದ್ದರಿಂದ ಸೇತುವೆಯ ಮೇಲೆ ಹಾದು ಹೋಗುವ ಸಂದರ್ಭದಲ್ಲಿ ಸೇತುವೆಯ ತುಂಡಾಗಿ ಮನುಷ್ಯರು ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇದೆ.ತಡೆಗೋಡೆ ಇಲ್ಲದೆ ಮಣ್ಣುಗಳೆಲ್ಲ ಜರಿದು ತಾತ್ಕಾಲಿಕವಾಗಿ ಅಡಿಕೆ ಮರದ ತುಂಡುಗಳನ್ನು ಹಾಕಿ ಸದ್ಯಕ್ಕೆ ನಡೆದುಕೊಂಡು ಹೋಗ್ತಾ ಇದ್ದಾರೆ. ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಮಳೆಗಾದಲ್ಲಿ ಈ ಭಾಗದ ಜನರ ಆರೋಗ್ಯ ಹದಗೆಟ್ಟರೆ ಆಸ್ಪತ್ರೆ ಕರೆದುಕೊಂಡು ಅಸಾಧ್ಯವಾಗುತ್ತದೆ.

Leave a Comment

Your email address will not be published. Required fields are marked *

error: Content is protected !!
Scroll to Top