ದಿನಾಂಕ 21.4.2026ನೇ ಮಂಗಳವಾರದಂದು ವಾಹನ ಸಂಖ್ಯೆ KA05 MS 6793ವಾಹನದಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿಗಳು ಆರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಲ್ಚಾರ್ ಸೇತುವೆಯ ಮೇಲಿನಿಂದ ಬಲ್ನಾಡ್ ಹೊಳೆಗೆ ತ್ಯಾಜ್ಯ ಎಸೆಯುತ್ತಿದ್ದನ್ನು ಗಮಸಿದ ಕಲ್ಲುಗುಂಡಿ ರಿಕ್ಷಾ ಚಾಲಕರಾದ ಸದಾನಂದ ರೈ ಆರಂತೋಡಿನ ರಿಕ್ಷಾ ಚಾಲಕರಾದ ಹರಿಶ್ಚಂದ್ರ ನೆಕ್ಕಿಲ ಮತ್ತು ಆದರ್ಶ ದೇರಾಜೆಯವರು ತಡೆದು ನಿಲ್ಲಿಸಿ ಆರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್. ಎಂ. ಆರ್. ರವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ರೂ 5000ದಂಡ ವಿಧಿಸಿದರು.ಮೊದಲು ಪಂಚಾಯತ್ ಅಧಿಕಾರಿಗಳು ವಿಚಾರಿಸಿದಾಗ ತ್ಯಾಜ್ಯ ಎಸೆದವರು ಉಡಾಫೆಯಿಂದ ಮಾತಾಡಿದಾಗ 112ಕ್ಕೆ ತುರ್ತು ಕರೆ ಮಾಡಿ ಪೊಲೀಸ್ ರನ್ನು ಕರೆಸ ಲಾಯಿತು.ಅವರ ಸಹಕಾರದಿಂದ ದಂಡನೆ ವಿಧಿಸಲಾಯಿತು. ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ನ ನಿಕಟಪೂರ್ವ ಉಪಾಧ್ಯಕ್ಷರಾದ ಭವಾನಿ ಚಿಟ್ಟನೂರು ಮತ್ತು ಸ್ಥಳೀಯರು ಸಹಕಾರ ನೀಡಿದರು. ಆರಂತೋಡು ಗ್ರಾಮ ಪಂಚಾಯತ್ ನ ಸ್ವಚ್ಛತಾ ಅಭಿಯಾನಕ್ಕೆ ಸ್ಥಳೀಯರ ಜಾಗೃತಿ ಮತ್ತು ಸಹಕಾರ ಗಮನಿಸಬೇಕಾದ ವಿಷಯವಾಗಿದೆ.
ಕುಲ್ಚಾರ್ ಹೊಳೆಗೆ ತಾಜ್ಯ ಎಸೆದವರಿಗೆಆರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ರೂ 5000 ದಂಡ.




















