ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆ.ಎಸ್.ಆರ್.ಟಿ.ಸಿ ಸುಳ್ಯ ಕೊಯನಾಡು ಸರ್ವಿಸ್ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಏ.28ರಂದು ವರದಿಯಾಗಿದೆ.
ಕಾರು ಜಖಂಗೊಂಡಿದ್ದು ಮಹಿಳೆಯನ್ನು ಅಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.ನಿಂತಿದ್ದ ಬಸ್ಸಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ.ಬಸ್ಸು ಮತ್ತು ಕಾರು ಕೊಯನಾಡು ಕಡೆಯಿಂದ ಸುಳ್ಯ ಕಡೆ ಬರುತ್ತಿತ್ತು.
ಅರಂತೋಡು : ಕಾರು ಬಸ್ಸು ಅಪಘಾತ,ಮಹಿಳೆಗೆ ಗಾಯ
















































