ಸಂಪಾಜೆ ವಲಯದ ಅರಂಬೂರು,ಅರಂತೋಡು, ತೊಡಿಕಾನ ಕಾರ್ಯಕ್ಷೇತ್ರದಲ್ಲಿ ಒಕ್ಕೂಟಗಳ ಪದಗ್ರಹಣ ಪೂರ್ವಭಾವಿ ಸಭೆಯನ್ನು ಅರಂತೋಡು ರಬ್ಬರ್ ಹಾಲು ಉತ್ಪಾದಕರ ಸೊಸೈಟಿಯಲ್ಲಿ ಹಮ್ಮಿಕೊಳ್ಳಲಾಯಿತು.
ವಲಯ ಅಧ್ಯಕ್ಷರಾದ ಹೂವಯ್ಯ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂದರ್ಭದಲ್ಲಿ ಅರಂಬೂರು ಒಕ್ಕೂಟದ ಅಧ್ಯಕ್ಷರಾದ ಚಂದ್ರಶೇಖರ ನೆಡ್ಚಿಲು,ಅರಂತೋಡು ಒಕ್ಕೂಟದ ಅಧ್ಯಕ್ಷರಾದ ರತ್ನಾವತಿ ಅಳಿಕೆ,ತೊಡಿಕಾನ ಒಕ್ಕೂಟದ ಅಧ್ಯಕ್ಷರಾದ ಜನಾರ್ಧನ ಬಾಳೆಕಜೆ,ಹಾಗೂ ಎಲ್ಲಾ ಒಕ್ಕೂಟದ ನೂತನ ಅಧ್ಯಕ್ಷರುಗಳು ,ಪದಾಧಿಕಾರಿಗಳುವಲಯದ ಮೇಲ್ವಿಚಾರಕರಾದ ಹರೀಶ್ ರವರ ಉಪಸ್ಥಿತಿಯಲ್ಲಿ ಸಭೆಯನ್ನು ನಡೆಸಿ ಮುಂದಿನ ಪದ ಗ್ರಹಣದ ಬಗ್ಗೆ ಚರ್ಚಿಸಲಾಯಿತು.
ತೊಡಿಕಾನ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸುಂದರ ರವರು ಸ್ವಾಗತಿಸಿದರು. ಅರಂಬೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ವಿಜಯಶ್ರೀ ರವರು ವಂದಿಸಿದರು. ಅರಂತೋಡು ಸೇವಾ ಪ್ರತಿನಿಧಿ ಗೀತಾ ರವರು ಉಪಸ್ಥಿತರಿದ್ದರು.
ಸಂಪಾಜೆ ವಲಯದ ಒಕ್ಕೂಟಗಳ ಪದಗ್ರಹಣ ಪೂರ್ವಭಾವಿ ಸಭೆ





































































