ರಾಜ್ಯ ಮಟ್ಟದ “ಪ್ರಕೃತಿ” ಅಧ್ಯಯನ ಚಾರಣ ಶಿಬಿರ ಸಮಾಪನ

ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ,ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ,ಪಂಜ ಸ್ಥಳೀಯ ಸಂಸ್ಥೆ ಹಾಗೂ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇವರ ಸಹಭಾಗಿತ್ವದಲ್ಲಿ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ “ಪ್ರಕೃತಿ ಅಧ್ಯಯನ ಚಾರಣ ಶಿಬಿರ” ಮೇ. 20 ರಂದು ಸಮಾಪನಗೊಂಡಿತು
ಈ ಸಂದರ್ಭ ರಾಜ್ಯ ಮುಖ್ಯ ಆಯುಕ್ತರಾದ ಡಾ.ಪಿ.ಜಿ.ಆ‌ರ್ ಸಿಂಧ್ಯರವರು ಮಾತನಾಡಿ ಪ್ರಕೃತಿ ಅಧ್ಯಯನ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಮತ್ತು ತಿಳುವಳಿಕೆಯ ಜ್ಞಾನವನ್ನು ಮೂಡಿಸುವಲ್ಲಿ ಹೆಚ್ಚಿನ ಮಹತ್ತರ ಪಾತ್ರವಹಿಸುತ್ತದೆ. ಇಂತಹ ವಿಶೇಷ ಶಿಬಿರವನ್ನು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಸಂಘಟಿಸುತ್ತಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಮಾಧವ ಬಿ ಕೆ ವಹಿಸಿದ್ದರು. .
ವೇದಿಕೆಯಲ್ಲಿ ರಾಜ್ಯ ಸಂಘಟನಾ ಆಯುಕ್ತರಾದ ಎಂ ಪ್ರಭಾಕರ್ ಭಟ್, ದ.ಕ.ಜಿಲ್ಲಾ ಗೈಡ್ ಆಯುಕ್ತ ಶ್ರೀಮತಿ ವಿಮಲ ರಂಗಯ್ಯ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ| ದೇವಿ ಪ್ರಸಾದ್ ಕಾನತ್ತೂರು, ಕುಮಾರಸ್ವಾಮಿ ವಿದ್ಯಾಲಯದ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಸಂಚಾಲಕರಾದ ಚಂದ್ರಶೇಖರ್ ನಾಯರ್, ಜಿಲ್ಲಾ ಕಾರ್ಯದರ್ಶಿಗಳಾದ ಪ್ರತೀಮ್ ಕುಮಾರ್, ಜಿಲ್ಲಾ ಸೈಟ್ ಸಹಾಯಕ ಆಯುಕ್ತರಾದ ಶ್ರೀ ದೇವಿಪ್ರಸಾದ್ ಜಾಕೆ, ಕುಮಾರಸ್ವಾಮಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾರತ್ನ, ಪಂಜ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ಶಿಬಿರದ ನಾಯಕರಾದ ಉದಯಕುಮಾರ್ ರೈ ಎಸ್ ಬಾಳಿಲ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀ ಭರತ್ ರಾಜ್ ಕೆ ಉಪಸ್ಥಿತರಿದ್ದರು.





































































































Leave a Comment

Your email address will not be published. Required fields are marked *

error: Content is protected !!
Scroll to Top