ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಸಾಮಾನ್ಯ ಸಭೆಯು ಘಟಕಾಧ್ಯಕ್ಷರಾದ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಇವರ ಅಧ್ಯಕ್ಷತೆಯಲ್ಲಿ ಮೇ 23ರಂದು ಜೇಸಿ ಭವನದಲ್ಲಿ ಗೌರವಾರ್ಪಣೆ ನಡೆಯಿತು.
ಕಾರ್ಯಕ್ರಮ ದಲ್ಲಿ
ಮಾತಿಲ್ಲದೆ ನಿರಂತರವಾಗಿ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ, ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ, ಶ್ರಮಿಕ ವರ್ಗದ . ಮಂಜುನಾಥ್ ಮಡ್ತಿಲ ಇವರನ್ನು ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ನೀಡಿ ಈ ಗೌರವಿಸಲಾಯಿತು.
ಸಮಾರಂಭದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ನಿಕಟಪೂರ್ವ ಅಧ್ಯಕ್ಷರು, ರಾಷ್ಟ್ರೀಯ ಸಂಯೋಜಕರಾದ ಜೆ ಎಫ್ ಎಂ ಸುರೇಶ್ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಸದಸ್ಯರಾದ ಶ್ರೀ. ವಿಜಯ ಆಲೆಟ್ಟಿ, ಮುಖಂಡರಾದ ಸುಪ್ರೀತ್ ಮೋoಟಡ್ಕ, ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ಜೇಸಿ ಹೆಚ್ ಜಿ ಎಫ್ ಗುರುರಾಜ್ ಅಜ್ಜಾವರ, ಜೇಸಿ ಹೆಚ್ ಜಿ ಎಫ್. ನವೀನ್ ಕುಮಾರ್ ಹಾಗೂ ಜೇಸಿಐ ಪಯಸ್ವಿನಿಯ ಸದಸ್ಯರು ಉಪಸ್ಥಿತರಿದ್ದರು.
ಜೇಸಿ ಮಹೇಶ್ ಮೇರ್ಕಜೆ ವೇದಿಕೆಗೆ ಆಹ್ವಾನಿಸಿ, ಜೇಸಿ. ಪ್ರಶಾಂತ್ ಅಂಬೆಕಲ್ಲು ಜೇಸಿ ವಾಣಿ ವಾಚಿಸಿದರು. ಜೇಸಿ ಸತ್ಯ ಶಾಂತಿ ತ್ಯಾಗ ಮೂರ್ತಿ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿ, ಕಾರ್ಯದರ್ಶಿ ಜೇಸಿ ಹೆಚ್ ಜಿ ಎಫ್ ತಾರಾ ಮಾದವ ಚೂಂತಾರು ವಂದಿಸಿದರು.























































