ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಮತ್ತು ಚಂದನ ಯುವತಿ ಮಂಡಲ ಅಡ್ತಲೆ ಇವರ ವತಿಯಿಂದ ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇವರ ಆಶ್ರಯದಲ್ಲಿ ಪಂಚಸಪ್ತತಿ ಸ್ವಚ್ಚತಾ ಅಭಿಯಾನದ ಸ್ವಚ್ಚ ಅಂಗಡಿ ಪ್ರಶಸ್ತಿ ಪ್ರದಾನ,ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಹಾಗೂ NIMA (R) ಸುಳ್ಯ ಇವರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಕಾರದೊಂದಿಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಕಾರ್ಯಕ್ರಮವು ಅರಂತೋಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಇಂದು ಆರಂಭಗೊಂಡಿದೆ. ಉದ್ಘಾಟನೆಯನ್ನು ಅರಂತೋಡು -ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ನೆರವೇರಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಸ್ಪಂದನ ಗೆಳೆಯರ ಬಳಗ ರಿ. ಅಡ್ತಲೆ ಇದರ ಅಧ್ಯಕ್ಷರಾದ ವಿನಯ್ ಬೆದ್ರುಪಣೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅರಂತೋಡು ಇದರ ನಿಕಟಪೂರ್ವ ಅಧ್ಯಕ್ಷರಾದ ಕೇಶವ ಅಡ್ತಲೆ, NIMA ರಿ. ಸುಳ್ಯ ಸಂಚಾಲಕರಾದ ಡಾ. ವೆಂಕಟೇಶ್, ಅರಂತೋಡು ಅಂಚೆ ಪಾಲಕರಾದ ವಿಜಯ್, ಚಂದನ ಯುವತಿ ಮಂಡಲದಲ್ಲಿ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಅಡ್ತಲೆ, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ ಉಪಸ್ಥಿತರಿದ್ದು ಶುಭ ಹಾರೈಸಿದರು. ವೇದಿಕೆಯಲ್ಲಿ ಸ್ಪಂದನದ ಕಾರ್ಯದರ್ಶಿ ಸಂತೋಷ್ ಪಿಂಡಿಮನೆ, ಜೊತೆ ಕಾರ್ಯದರ್ಶಿ ಕಿಶೋರ್ ಅಡ್ಕ, ಖಚಾಂಜಿ ಸುನಿಲ್ ಅಡ್ತಲೆ ಉಪಸ್ಥಿತರಿದ್ದರು. ಸ್ಪಂದನದ ಮಾಧ್ಯಮ ಕಾರ್ಯದರ್ಶಿ ರಂಜಿತ್ ಅಡ್ತಲೆ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ , ಕಿಶೋರ್ ಅಡ್ಕ ವಂದಿಸಿದರು. ಚಂದನ ಯುವತಿ ಮಂಡಲದ ಸದಸ್ಯೆ ಶ್ರೀಮತಿ ಅಶ್ವಿನಿ ಪಿಂಡಿಮನೆ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಅರಂತೋಡು ವ್ಯಾಪ್ತಿಯ ಸ್ವಚ್ಚ ಅಂಗಡಿ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಲ್ಲಿಕಾ ಟ್ರೇಡರ್ಸ್ ಅರಂತೋಡು,ಜೈ ಜವಾನ್ ಕ್ಯಾಂಟೀನ್,ಹೋಟೇಲ್ ಅತಿಥಿ ,ದುರ್ಗಾ ಕ್ಯಾಂಟೀನ್ ಅರಂತೋಡು,ಸದಾನಂದ ಅಡ್ತಲೆ ಅಂಗಡಿ,ಕುತ್ತಮೊಟ್ಟೆ ಕಾಂಪ್ಲೆಕ್ಸ್ ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅರಂತೋಡು ಸುಮಾರು 100 ಕ್ಕೂ ಮಿಕ್ಕಿ ಫಲಾನುಭವಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು. ಸ್ಪಂದನದ ಸದಸ್ಯರುಗಳು ಸಹಕರಿಸಿದರು.
ಅರಂತೋಡಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆಧಾರ್ ನೋಂದಣಿ& ತಿದ್ದುಪಡಿ ಶಿಬಿರ ಮತ್ತು ಸ್ವಚ್ಚ ಅಂಗಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ























































