ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ತಾಲೂಕು ಪಂಚಾಯತ್ ಸುಳ್ಯ ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಜೂ.8ರಂದು
ಟಿಬಿ ನಿರ್ಮೂಲನೆ ಮುಟ್ಟಿನ ನೈರ್ಮಲ್ಯ ದಿನ ಗರ್ಭಕೋಶದ ಕ್ಯಾನ್ಸರ್ ಹಾಗೂ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಕುರಿತು ಮಾಹಿತಿ ಕಾರ್ಯಗಾರ ತಾಲೂಕು ಪಂಚಾಯತ್ ಸಭಾಂಗಣ ಸುಳ್ಯದಲ್ಲಿನಡೆಯಿತು.
ತಾಲೂಕು ಪಂಚಾಯತ್
ಕಾರ್ಯ ನಿರ್ವಾಹಕ ಅಧಿಕಾರಿ ರಾಜಣ್ಣ ಅಧ್ಯಕ್ಷತೆಯನ್ನು ವಹಿಸಿದ್ದರು
ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಯಶೋಧ ಬಾಳೆಗುಡ್ಡೆ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ
ಎಲ್ ಎನ್ ಬಿಟ್ಟಿ ಬಿ ನಡು ನೀಲನ್ ಸಂಪನ್ಮೂಲ ವ್ಯಕ್ತಿ ಗುತ್ತಿಗಾರು, ಕ್ರಿಸ್ಟಾಲ್ CHO ಆಯುಷ್ಮಾನ್ ಆರೋಗ್ಯ ಕೇಂದ್ರ ಸುಳ್ಯ ಬಿ, ಲೀಲಾವತಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಆಯುಷ್ಮಾನ್ ಆರೋಗ್ಯ ಕೇಂದ್ರ ಸುಳ್ಯ, ಶಿಶು ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಸುಳ್ಯ ಅಂಗನವಾಡಿ ಮೇಲ್ವಿಚಾರಕಿ ವಿಜಯ ಕೆ, ತಾಲೂಕು NRLM ಕಾರ್ಯಕ್ರಮ ವ್ಯವಸ್ಥಾಪಕರು ಶ್ವೇತಾ, ದಿವ್ಯ ಸಜನ್ ಗುಡ್ಡೆಮನೆ ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಕಾರ್ಯದರ್ಶಿ ಹಾಗೂ ಅರುಣ ಜತೆ ಕಾರ್ಯದರ್ಶಿ ಉಪಸ್ಥಿತರಿದ್ದರು.
ಕಾರ್ಯನಿರ್ವಾಹಕ ಅಧಿಕಾರಿ ಯವರು ಮಹಿಳೆಯರ ಆರೋಗ್ಯದ ಕಾಳಜಿ ಬಗ್ಗೆ, ದೈಹಿಕ ಸಮಸ್ಯೆಗಳು, ಕ್ಯಾನ್ಸರ್ ಬಗ್ಗೆ ಮುಟ್ಟಿನ ತೊಂದರೆಯ ಬಗ್ಗೆ ಮಾಹಿತಿಯ ಕೊರತೆ ಇರುವಲ್ಲಿ ನಮ್ಮ ಸಮಿತಿಯಿಂದ ಮಾಹಿತಿ ಒದಗಿಸುವುದನ್ನು ಮಾಡಬೇಕಾಗುತ್ತದೆ ಹಾಗೂ ಶಾಲೆ ಕಾಲೇಜುಗಳಲ್ಲಿ ಮಕ್ಕಳಿಗೆ ಇಂಥ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು CRP ಗಳು ಕೊಡುವಂತೆ ತಾಲೂಕು ಶಿಕ್ಷಣಾಧಿಕಾರಿಯವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಯಶೋದ ಬಾಳೆಗುಡ್ಡೆ ಇವರು ಶುಭ ಹಾರೈಸಿದರು. ದಿವ್ಯ ಸುಜನ್ ಇವರು ಮಹಿಳೆಯರ ಮುಟ್ಟಿನ ನೈರ್ಮಲ್ಯದ ಕಾರ್ಯಕ್ರಮ ಬಗ್ಗೆ ಒಳ್ಳೆಯ ಅಭಿಪ್ರಾಯದ ವ್ಯಕ್ತಪಡಿಸಿದರು. ಎಲ್ ಎನ್ ಬಿಟ್ಟಿ ಬಿ ನಡುನೀಲನ್ ರವರು safe and care ಬಗ್ಗೆ, ಮಹಿಳೆಯರು ಅನುಭವಿಸುವ ಕಷ್ಟಗಳ ಬಗ್ಗೆ , ಗರ್ಭಕೋಶ ಕ್ಯಾನ್ಸರ್ ಹರಡುವುದನ್ನು ಯಾವ ರೀತಿ ತಡೆಗಟ್ಟಬಹುದು ಹಾಗೂ ಅದು ಯಾವ ರೀತಿಯಾಗಿ ಕ್ಯಾನ್ಸರ್ ಬರುವುದು ಎಂಬುದನ್ನು ಸ್ಯಾನಿಟರಿ ಪ್ಯಾಡ್ ಬಳಕೆಯ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ಹಾಗೂ ಅದನ್ನು ವಿಲೇವಾರಿ ಮಾಡುವಂತ ವಿಧಾನವನ್ನು ಕೂಡ ಉತ್ತಮವಾಗಿ ಮಾಹಿತಿಯನ್ನು ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ವಿಜಯ ರವರು ಮಕ್ಕಳ ಹಕ್ಕುಗಳ ಬಗ್ಗೆ ಮಹಿಳೆಯ ಕಾನೂನು ಕಾಯಿದೆಯ ಬಗ್ಗೆ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದರು.
ಈ ಮಾಹಿತಿ ಕಾರ್ಯಕ್ರಮದಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಎಂ ಬಿ ಕೆ ಎಲ್ ಸಿ ಆರ್ ಪಿ ಗಳು ಹಾಗೂ ಕೃಷಿ ಸಖಿಗಳು NRLM ಸಿಬ್ಬಂದಿಗಳು ಹಾಜರಿದ್ದರು. ಜಯಲಕ್ಷ್ಮಿ ತಾಲೂಕು ಸಮುದಾಯ ಸಂಪನ್ಮೂಲ ವ್ಯಕ್ತಿ ಪಂಚಾಯತ್ ರಾಜ್ ಸಂಸ್ಥೆ ಕಾರ್ಯಕ್ರಮವನ್ನು ನಿರೂಪಿಸಿದರು. ಕೃಷಿ ಸಖಿ ಮೋಹಿನಿ ಸಂಪಾಜೆ ವಂದಿಸಿದರು.
ಶ್ರೀನಿಧಿ ಪ್ರಾರ್ಥಿಸಿದರು.
ಸುಳ್ಯ : ಟಿಬಿ ನಿರ್ಮೂಲನೆ ಮುಟ್ಟಿನ ನೈರ್ಮಲ್ಯ ದಿನ ಗರ್ಭಕೋಶದ ಕ್ಯಾನ್ಸರ್ ಹಾಗೂ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಕುರಿತು ಮಾಹಿತಿ ಕಾರ್ಯಗಾರ

























































