ಅಮರ ಸುಳ್ಯ 1837 ಚಲನಚಿತ್ರ ನಿರ್ಮಾಣಕ್ಕೆ ಸಿದ್ದತೆ : ಎ.ಕೆ.ಹಿಮಕರ

ಜಾಗತಿಕ ಇತಿಹಾಸದಲ್ಲಿ ದ್ರುವ ನಕ್ಷತ್ರದಂತೆ ಮಿನುಗುವ ಘಟನೆಯೊಂದು ಅಮರ ಸುಳ್ಯದಲ್ಲಿ ಘಟಿಸಿದ್ದು, ಇದೀಗ ಎಲ್ಲರಿಗೂ ತಿಳಿದಿರುವ ವಿಷಯ. ಈ ಮಹತ್ತರ ಐತಿಹಾಸಿಕ ಸಂಗತಿಯನ್ನು ಹಲವರು ಹಲವು ರೀತಿಯಲ್ಲಿ ಚಿತ್ರಿಸಿದ್ದಾರೆ. ಹೀಗಿದ್ದರೂ ಚರಿತ್ರೆಯ ನೈಜ ಚಿತ್ರವು ಇನ್ನೂ ಮಸುಕಾಗಿಯೇ ಇದೆ. ಹಾಗಾಗಿ, ಈ ಬಗ್ಗೆ ಆಸಕ್ತ ಸ್ನೇಹಿತರು ಒಂದಾಗಿ “ಆರ್ಟಿಸ್ಟ್‌ಸ್ ಯುನ್ಯಾಟೆಡ್” ಎಂಬ ಬ್ಯಾನರ್‌ನ ಅಡಿಯಲ್ಲಿ “ಅಮರ ಸುಳ್ಯ-1837” ಎಂಬ ಪೂರ್ಣ ಪ್ರಮಾಣದ ಚಲನ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ ಎಂದು ಎ.ಕೆ ಹಿಮಕರ ತಿಳಿಸಿದ್ದಾರೆ.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಸಾಹತುಶಾಹಿಯ ಸುಳ್ಯದವರೇ ಆದ ಅಮರ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ ಕೊಡಗು ಮತ್ತು ಸಮಗ್ರ ತುಳುನಾಡಿನ ಸ್ವಾತಂತ್ರ್ಯ ಯೋಧರು ಸಂಘಟಿತರಾಗಿ ಬ್ರಿಟಿಷ್ ವಿರುದ್ಧ ಸೆಣಸಾಡಿ ಜಯಶಾಲಿಯಾಗಿ ಸ್ವತಂತ್ರ ಸರಕಾರವೊಂದನ್ನು ಮುನ್ನಡೆಸಿದರು. ಕೇವಲ 13 ದಿನಗಳ ಸರಕಾರವಾದರೂ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮೊತ್ತ ಮೊದಲ ಗೆಲುವಾಗಿದೆ. ಇಂದು ನಾವೆಲ್ಲರೂ ಹೆಮ್ಮೆ ಪಡುವ ನಮ್ಮ ಅಭಿಮಾನದ ಸಂಕೇತವಾಗಿದ್ದು ಸುಳ್ಯದ ಅಸ್ಮಿತೆಯೆಂದೇ ಪರಿಗಣಿಸುವಂತಾಗಿದೆ.
ಅಂದು ರೈತ, ದಲಿತ, ಆದಿವಾಸಿ, ಭಾರತೀಯರ ವಿರುದ್ಧ ದಮನಕಾರಿ, ಸುಲಿಗೆಕೋರ ಆಡಳಿತ ನೀತಿಯನ್ನು ಅನುಸರಿಸುತ್ತಾ ನಮ್ಮವರನ್ನು ಶೋಷಿಸುತ್ತಾ ಬಂದ ಬ್ರಿಟಿಷ್ ವಸಾಹತುಶಾಹಿ ನೀತಿಯನ್ನು ಆಧುನಿಕ ನವ ವಸಾಹುತುಶಾಹಿಯೊಂದಿಗೆ ತುಲನಾತ್ಮಕವಾದ ಮತ್ತು ಕಲಾತ್ಮಕ ಈ ಚಲನಚಿತ್ರವು ಸಮಕಾಲೀನ ಪ್ರತಿಫಲನವನ್ನು ಚಿತ್ರದಲ್ಲಿ ಕಾಣಬಹುದು. ಇತಿಹಾಸವಿದೆ. ಕಲಾತ್ಮಕ, ಸೈದ್ಧಾಂತಿಕ ಮನರಂಜನೆಯೂ ಇರುತ್ತದೆ. ನಮ್ಮದೇ ಆಗುಹೋಗುಗಳಿಗೆ ಸ್ಪಂದನೆಯಂತಿದೆ. ಚಿತ್ರದಲ್ಲಿ ನೈಜ ಚಿಂತನೆಯೂ ಇದೆ. ಹಾಗೆಯೇ ಸೃಜನಶೀಲತೆ, ಹಾಸ್ಯ, ಚರಿತ್ರೆಯನ್ನು ಮುಂದಿನ ತಲೆಮಾರಿಗೆ ತಿಳಿಸುವ ಗುರಿಯನ್ನು ಹೊಂದಿದೆ.
ಇಂತಹ ಸೃಜನಶೀಲ ಚಿತ್ರ ನಿರ್ಮಾಣದ ಹೊಣೆಯನ್ನು ‘ಅಮರ ಸುಳ್ಯ-1837 ಸ್ಮಾರಕ ಟ್ರಸ್ಟ್ ಹೊತ್ತಿದೆ. ಟ್ರಸ್ಟ್‌ನಲ್ಲಿ ಸಾಹಿತಿ ಕೆ.ಆರ್.ತೇಜಕುಮಾರ್ (ಮೇನೇಜಿಂಗ್ ಟ್ರಸ್ಟಿ), ಎ.ಕೆ.ಹಿಮಕರ ಕಾರ್ಯದರ್ಶಿಯಾಗಿ, ಬೇಕಲ್ ರಾಮನಾಥ ಖಜಾಂಜಿಯಾಗಿ ಮತ್ತು ಡಾ.ಕೆ.ಆರ್.ವಿದ್ಯಾಧರ ಮತ್ತು ಬೆಂಗಳೂರಿನ ಜಾನ್ ದೇವರಾಜ್ ಸದಸ್ಯರಾಗಿದ್ದಾರೆ. ಮೂಲತಃ ಬೆಂಗಳೂರಿನವರೇ ಆದ ಜಾನ್ ದೇವರಾಜ್ ಅವರ ಕನ್ನಡ, ಹಿಂದಿ, ಇಂಗ್ಲಿಷ್ ಸಿನೆಮಾ ಕ್ಷೇತ್ರಗಳಲ್ಲಿ ಹತ್ತು ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಶಸ್ತಿ ಗಳಿಸಿದವರಾಗಿದ್ದು, ಅಮರ ಸುಳ್ಯ-1837 ಚಿತ್ರದ ನಿರ್ದೇಶನ ಮಾಡಲಿದ್ದಾರೆ. ಸಂಶೋಧಕ ಡಾ. ವಿದ್ಯಾಧರ ಕುಡೆಕಲ್ಲು ಅವರು ಬರೆದ ಕೃತಿಗೆ ಎ.ಕೆ. ಹಿಮಕರ ಚಿತ್ರಕತೆ ಬರೆದಿದ್ದಾರೆ. 2026ರ ಪ್ರಾಂತ್ಯಕ್ಕೆ ಚಲನಚಿತ್ರವು ಪ್ರದರ್ಶನಕ್ಕೆ ಸಿದ್ಧಪಡಿಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಲನ ಚಿತ್ರ ನಿರ್ದೆಶಕ ಜಾನ್ ದೇವರಾಜ್, ತೇಜ್ ಕುಮಾರ್ ಬಡ್ಡಡ್ಕ,ವಿದ್ಯಾದರ ಬಡ್ಡಡ್ಕ,ನಟ ಮಿಥುನ್ ಸೋನ ಉಪಸ್ಥಿತರಿದ್ದರು.















































































































Leave a Comment

Your email address will not be published. Required fields are marked *

error: Content is protected !!
Scroll to Top