ಎಸ್ ಕೆ ಎಸ್ ಬಿ ವಿ, ನುಸ್ರತ್ತುಲ್ ಇಸ್ಲಾಂ ಮದರಸ ಅರಂತೋಡು ಇದರ ಆಶ್ರಯದಲ್ಲಿ ಮುಅಲ್ಲಿಮ್ ಡೇಯನ್ನು ಜೂ.21ರಂದು ಆಚರಿಸಲಾಯಿತು. ಜಮಾಅತ್ ಅಧ್ಯಕ್ಷ ಆಶ್ರಫ್ ಗುಂಡಿ ಅಧ್ಯಕ್ಷತೆ ವಹಿಸಿದ್ದರು. ಸದರ್ ರವೂಫ್ ಅಝ್ ಹರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮದರಸ ಉಸ್ತುವಾರಿ ಅಮೀರ್ ಕುಕ್ಕುಂಬಳ ಸ್ವಾಗತಿಸಿದರು. ಮುಅಲ್ಲಿಮ್ ಡೇಯ ಮಹತ್ವ ಬಗ್ಗೆ ಸಂದೇಶ ಭಾಷಣವನ್ನು ಅರಂತೋಡು ಬದ್ರಿಯ ಜುಮಾಮಸೀದಿ ಖತೀಬರಾದ ಬಹು|ಆಸಿಫ್ ಅಝ್ ಹರಿ ಮಾತನಾಡಿ ನಿಸ್ವಾರ್ಥ ಸೇವೆಯ ಮೂಲಕ ಧಾರ್ಮಿಕ ಜ್ಞಾನವನ್ನು ಪಸರಿಸುತ್ತಿರುವ ನಮ್ಮ ಉಸ್ತಾದರನ್ನು ಗೌರವಿಸುವ ಬದಲು ಮರೆಯುವ ಕಾಲವಾಗಿದೆ. ಅದಕ್ಕಾಗಿ ಸಮಸ್ತ ನಿರ್ದೇಶನ ಪ್ರಕಾರ ಪ್ರತಿ ವರ್ಷ ಮದರಸದಲ್ಲಿ ಮು ಅಲ್ಲಿಮ್ ಡೇ ಆಚರಿಸಿ ವಿಶೇಷ ಪ್ರಾರ್ಥನೆ ಮಾಡಲಾಗುದೆಂದರು .
ಸಹಾಯ ಅಧ್ಯಾಪಕ ಅಬ್ದುಲ್ ರಹಿಮಾನ್ ಝು ಹರಿ, ಸಲಹಾ ಸಮಿತಿ ಸದಸ್ಯ ಹಾಜಿ ಬದರುದ್ದೀನ್ ಪಠೇಲ್, ಎಸ್ ಕೆ ಎಸ್ ಎಸ್ ಎಫ್ ತಾಲೂಕು ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಜಮಾಅತ್ ಉಪಾಧ್ಯಕ್ಷ ಹಾಜಿ ಕೆ ಎಂ ಮಹಮ್ಮದ್ , ಕೋಶಾಧಿಕಾರಿ ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ನಿರ್ದೇಶಕರಾದ ಹಾಜಿ ಅಬ್ದುಲ್ ಖಾದರ್ ಪಠೇಲ್, ಎ ಹನೀಫ್, ಮುಜೀಬ್ ಅರಂತೋಡು, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಜುಬೈರ್ ಎಸ್ ಇ, ಕಾರ್ಯದರ್ಶಿ ಸಂಶುದ್ದೀನ್ ಕ್ಯೂರ್, ಸೂಫಿ, ಆಶಿಕ್ ಕುಕ್ಕುಂಬಳ, ಹಮೀದ್ ಎ ಮೊದಲಾದವರು ಉಪಸ್ಥಿತರಿದ್ದರು. ರುಫೈಝ್ ಕಾರ್ಯಕ್ರಮ ನಿರೋಪಿಸಿದರು ಈ ಸಂದರ್ಭದಲ್ಲಿ ಮದರಸ ಅಧ್ಯಾಪಕರನ್ನು ಎಸ್ ಕೆ ಎಸ್ ಬಿ ವಿ ಪದಾಧಿಕಾರಿಗಳು ಗೌರವಿಸಿದರು .
ಅರಂತೋಡು ಮದರಸದಲ್ಲಿ ಮು ಅಲ್ಲಿಮ್ ಡೇ ಆಚರಣೆ





























































