ದ.ಕ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯವೇ ಇಲ್ಲವೆಂದು ಶಾಸಕ ಎಸ್.ಆರ್ ವಿಶ್ವಾನಥ ಹೇಳಿಕೆ ನೀಡಿರುವುದು ಖಂಡನೀಯ,ತಕ್ಷಣ ಅವರು ಕ್ಷಮೆಯಾಚಿಸಬೇಕೆಂದು
ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಒತ್ತಾಯಿಸಿದ್ದಾರೆ.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಒಕ್ಕಲಿಗರ ಮಠವಾದ ಆದಿಚುಂಚನಗಿರಿಗೆ ಪ್ರಧಾನ ಕಾರ್ಯದರ್ಶಿಯನ್ನು ನೀಡಿರುವುದು ಈ ಭಾಗದಿಂದ. ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದ ಕೆದಂಬಾಡಿ ರಾಮಯ್ಯ ಗೌಡ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಗುಡ್ಡೆಮನೆ ಅಪ್ಪಯ್ಯ ಗೌಡರು ಒಕ್ಕಲಿಗ ಸಮುದಾಯದ ಈ ಭಾಗದವರು. ಇತಿಹಾಸವನ್ನು ತಿಳಿದುಕೊಳ್ಳದೆ ಬಾಯಿಗೆ ಬಂದಂತೆ ಅವರು ಮಾತನಾಡಿರುವುದು ಖಂಡನೀಯ.ದ.ಕ.ಜಿಲ್ಲೆಯವರು ಶಾಂತಿಪ್ರಿಯರು. ನಮ್ಮನ್ನು ಕೆಣಕಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಸುಳ್ಯ ತಾಲೂಕಿನ ಹಿರಿಯ ಒಕ್ಕಲಿಗ ಮುಖಂಡ ಭರತ್ ಮುಂಡೋಡಿ ಮಾತನಾಡಿ ದ.ಕ.ಜಿಲ್ಲೆಯಲ್ಲಿ ಗೌಡ ಒಕ್ಕಲಿಗ ಸಮುದಾಯವೇ ಇಲ್ಲ. ಒಕ್ಕಲಿಗರಿರುವುದು ಹಳೆ ಮೈಸೂರು ಭಾಗದಲ್ಲಿ ಮಾತ್ರ ಎಂದು ಎಸ್.ಆರ್. ವಿಶ್ವನಾಥರು ಹೇಳಿಕೆ ನೀಡಿದ್ದು ಇದಮ್ನು ದಕ್ಷಿಣ ಕನ್ನಡದ ಗೌಡ ಸಮುದಾಯದವರು ಖಂಡಿಸುತ್ತೇವೆ. ನಾವು ಒಕ್ಕಲಿಗರೆಂದು ಹೇಳಲು ವಿಶ್ವನಾಥರು ಸರ್ಟಿಫಿಕೇಟ್ ನೀಡುವ ಅಗತ್ಯ ಇಲ್ಲ.ಮಂಗಳೂರಿನಲ್ಲಿ ಶಾಖಾ ಮಠ ತೆರೆಯಲಾಗಿದೆ.ಒಕ್ಕಲಿಗ ಸಂಘದವರು ಈ ಭಾಗದವರಿಗೆ ಪ್ರಾತಿನಿಧ್ಯ ಕೊಟ್ಟು ಡಾ.ಕುರುಂಜಿ ವೆಂಕಟ್ರಮಣ ಗೌಡರು ಸಂಘದ ನಿರ್ದೇಶಕರಾಗಿದ್ದರು. ಇದೀಗ ಅವರ ಮಗ ಡಾ.ರೇಣುಕಾಪ್ರಸಾದ್ ರವರು ನಿರ್ದೇಶಕರಾಗಿ, ಈಗ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಇದಕ್ಕಿಂತ ಹೆಚ್ಚಿನ ಪುರಾವೆ ಅವರಿಗೆ ಕೊಡುವ ಅಗತ್ಯವಿಲ್ಲ. ಎಸ್.ಆರ್. ವಿಶ್ವನಾಥರು ಅವರು ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಅವರು ಮಂಗಳೂರಿಗೆ ಬಂದಾಗ ನೋಡಿಕೊಳ್ಳುತ್ತೇವೆನ ಎಂದರು. “ಆದಿಚುಂಚನಗಿರಿ ಮಠದ ಈಗಿನ ಸ್ವಾಮೀಜಿಗಳಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಕೂಡಾ ಈ ಭಾಗದಲ್ಲಿ ಬಂದು ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅವರಲ್ಲಿ ನಾವು ಮನವಿ ಮಾಡುತ್ತಿದ್ದು, ದ.ಕ.ದಲ್ಲಿ ಒಕ್ಕಲಿಗರಿದ್ದಾರೆ. ಇಲ್ಲಿಯವರ ಬಗ್ಗೆ ಕೀಳಾಗಿ ಮಾತನಾಡಬಾರದೆಂದು ಎಸ್.ಆರ್. ವಿಶ್ವನಾಥರಿಗೆ ನ ಸ್ವಾಮೀಜಿಯವರು ಹೇಳುವ ಅಗತ್ಯ ಇದೆ.
ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್ ಗಂಗಾಧರ ಮಾತನಾಡಿ ಶಾಸಕ ಎಸ್.ಆರ್ ವಿಶ್ವನಾಥ ತಮ್ಮ ಸಮುದಾಯದ ಬಗ್ಗೆ ಕೀಳಗಾಗಿ ಹೇಳಿಕೆ ನೀಡಿರುವುದು ಸರಿಯಲ್ಲ.ಇದನ್ನು ಸುಳ್ಯ ಗೌಡರ ಯುವ ಸೇವಾ ಖಂಡಿಸುತ್ತದೆ.ತಕ್ಷಣ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಾಕೆ ಸಂತೋಷ್,ಸುಪ್ರಿತ್ ಮೋಂಟಡ್ಕ ಉಪಸ್ಥಿತರಿದ್ದರು.
ದ.ಕ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯವೇ ಇಲ್ಲವೆಂದು ಶಾಸಕ ಎಸ್.ಆರ್ ವಿಶ್ವನಾಥ ಹೇಳಿಕೆ ನೀಡಿರುವುದು ಖಂಡನೀಯ : ದಿನೇಶ್ ಮಡಪ್ಪಾಡಿ






























































