ಉತ್ತಮ‌ ಸಮಾಜ ಸೇವೆ ಮಾಡಿದರೆ ಜನರು ನಮ್ಮನ್ನು ಮೆಚ್ಚುತ್ತಾರೆ : ರೋ.ರವೀಂದ್ರ ಭಟ್

ಸುಳ್ಯ : ಉತ್ತಮ‌ ಸಮಾಜ ಸೇವೆ ಮಾಡಿದರೆ ಜನರು ನಮ್ಮನ್ನು ಮೆಚ್ಚುತ್ತಾರೆ, ನಾವೇಲ್ಲ ಸೇರಿಕೊಂಡು ಜತೆಯಾಗಿ ಕೆಲಸ ಮಾಡಿದರೆ ಮಾತ್ರ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯ ಎಂದು ರೋ.ಮೇಜರ್ ಡೋನರ್ ಪಿ.ಡಿ.ಜಿ ಎ.ಆರ್‌.ರವೀಂದ್ರ ಭಟ್ ಹೇಳಿದರು.
ಜು.7ರಂದು ರೋಟರಿ ಸಮುದಾಯ ಭವನ ಸುಳ್ಯದಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿಯ 2026-27ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
2026-27ನೇ ಸಾಲಿನ ನೂತನ ಅಧ್ಯಕ್ಷ ಪಿ.ಎಚ್.ಎಫ್ ರಾಗೇಶ್ ರಾಘವ್‌ ತಂಡಕ್ಕೆ ರೋ.ಲತಾ ಮಧುಸೂದನ ಪದಪ್ರದಾನ ಮಾಡಿದರು.
ಕಾರ್ಯದರ್ಶಿಯಾಗಿ ಪುರಂದರ ರೈ.ಪಿ, ಖಜಾಂಜಿಯಾಗಿ ನವೀನ್ ಚಂದ್ರ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ಪಿ.ಎಚ್.ಎಫ್ ಪ್ರೀತಮ್ ಡಿ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ಮಧು ಕಿರಣ್ ಕೆ.ಎನ್, ಸರ್ಜೆಂಟ್-ಅಟ್-ಆರ್ಮ್ಸ್ ಆಗಿ ಪಿ.ಎಚ್‌.ಎಫ್ ಮುರಳೀಧರ್ ರೈ, ಎಕ್ಸಿಕ್ಯೂಟಿವ್ ಚೇರ್ಮನ್ ಆಗಿ ಪಿಎಚ್‌ಎಫ್ ಪ್ರಮೋದ್ ಕುಮಾರ್, ಮೆಂಬರ್‌ಶಿಪ್ ಚೇರ್ಮನ್ ಆಗಿ ಅಭಿಷೇಕ್ ಕೇಕಡ್ಕ ವೊಕೇಶನಲ್ ಸರ್ವೀಸ್ ಚೇರ್ಮನ್ ಆಗಿ ಪಿ.ಎಚ್.ಎಫ್ ಶಿವಪ್ರಸಾದ್ ಕೆ.ವಿ, ಸರ್ವೀಸ್ ಪ್ರಾಜೆಕ್ಟ್ ಚೇರ್ಮನ್ ಆಗಿ ಹೇಮಂತ್ ಕಾಮತ್, ನ್ಯೂ ಜನರೇಷನ್ ಚೇರ್ಮನ್ ಆಗಿ ಮುಕುಂದ್ ನಾರ್ಕೋಡು, ಪಬ್ಲಿಕ್ ಇಮೇಜ್ ಚೇರ್ಮನ್ ಆಗಿ ರವಿಕಿರಣ್ ಪಿ.ಎನ್ ಹಾಗೂ ಪಲ್ಸ್ ಪೋಲಿಯೊ ಚೇರ್ಮನ್ ಆಗಿ ಡಾ. ಅಮಿತ್ ಕುಮಾರ್ ಟಿ. ಪದ ಪ್ರದಾನ ಸ್ವೀಕರಿಸಿದರು.
ಅಸಿಸ್ಟೆಂಟ್ ಗವರ್ನರ್ ರೋ.ಪಿ.ಹೆಚ್.ಎಫ್ ಆನಂದ ಖಂಡಿಗೆ,ರೋ ಮೇಜರ್ ಡೋನರ್ ಡಾ.ಕೇಶವ ಪಿ.ಕೆ, ನಿಕಟ ಪೂರ್ವ ಅಧ್ಯಕ್ಷ ರಾಗೇಶ್ ರಾಘವ್,ಕಾರ್ಯದರ್ಶಿ ಪುರಂದರ ರೈ .ಪಿ ನಿಕಟ ಪೂರ್ವ ಅಧ್ಯಕ್ಷ ಹೇಮಂತ್ ಕಾಮತ್, ಕಾರ್ಯದರ್ಶಿ ಸುಹಾಸ್ ಪಿ.ಜಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ರೋಟರಿಗೆ ಸೇರ್ಪಡೆಗೊಂಡ ಹೊಸ ಸದಸ್ಯರನ್ನು ಸ್ವಾಗತಿಸಲಾಯಿತು.



























































































































Leave a Comment

Your email address will not be published. Required fields are marked *

error: Content is protected !!
Scroll to Top