ದಿನ ಕಳೆದಂತೆ ರೈತರಿಗೆ ಸುಳ್ಯ ತಾಲೂಕಿನಲ್ಲಿ ಕಾಡಾನೆಗಳ ಸಮಸ್ಯೆ ಹೆಚ್ಚುತ್ತಿದ್ದು ಕಳೆದ ರಾತ್ರಿ( ಜೂ.8) ಸುಳ್ಯ ಗಾಂಧಿನಗರ ಕೆ.ಪಿ.ಎಸ್.ಶಾಲೆಯ. ಸುಮಾರು 350 ಮೀ.ಅಂತರ ದೂರದ ರೈತರ ತೋಟಗಳಿಗೆ ಕಾಡಾನೆಗಳು ನುಗ್ಗಿ ಕೃಷಿಗಳನ್ನು ನಾಶ ಮಾಡಿದ ಘಟನೆ ವರದಿಯಾಗಿದೆ.
ಉಬರಡ್ಕ ರಸ್ತೆ ಕಡೆಯಿಂದ ಬಂದ ಕಾಡಾನೆಗಳು ಅಟಲ್ ನಗರ,ದೇಂಗೋಡಿ,ಅಳಿಕೆ ಮಜಲು,ಕಾಯರ್ತೋಡಿ ಬೈಲಿಗೆ ನುಗ್ಗಿ ಸುಮಾರು 15ಕ್ಕೂ ಅಧಿಕ ರೈತರ ತೋಟಗಳಲ್ಲಿ ಕ್ರಷಿ ನಾಶ ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಕೆಲವೆಡೆ ಆವರಣ ಗೋಡೆಗಳನ್ನು ಆನೆಗಳು ಹುಡಿ ಮಾಡಿ ಹಾಕಿವೆ.
ಸುಳ್ಯ ನಗರ ಸಮೀಪದ ತೋಟಗಳಲ್ಲಿ ಕಾಡಾನೆಗಳಿಂದ ಕೃಷಿ ನಾಶ !

































































